



ಹೆಬ್ರಿ : ಕುಚ್ಚೂರು ಕುಡಿಬೈಲ್ ಶಾಂತಿನಿಕೇತನ ಸಂಸ್ಥೆ ಗ್ರಾಮೀಣ ಮಟ್ಟದಲ್ಲಿ ಪ್ರಮುಖ ಸಂಸ್ಥೆಯಾಗಿ ಮೂಡಿಬರಲು ಸಂಘದ ಸದಸ್ಯರೇ ಪ್ರಮುಖ ಕಾರಣವಾಗಿದ್ದು, ಆ ಮೂಲಕ ಸಮಾಜದಲ್ಲಿ ರಾಜ್ಯದಾದ್ಯಂತ ನಿರಂತರ ಸಾಮಾಜಿಕ ಧಾರ್ಮಿಕ ಆರ್ಥಿಕ ಶೈಕ್ಷಣಿಕ ಹಾಗೂ ಅಶಕ್ತರ ಪರ ನಿಂತು ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಶಾಂತಿನಿಕೇತನ ಅಧ್ಯಕ್ಷ ರಾಜೇಶ್ ಕುಡಿಬೈಲ್ ಹೇಳಿದರು. ಅವರು ಭಾನುವಾರ ಶಾಂತಿನಿಕೇತನ ಪ್ರಧಾನ ಕಚೇರಿಯಲ್ಲಿ ಶಾಂತಿನಿಕೇತನ ಸಂಸ್ಥಾಪನಾ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘ ಸ್ಥಾಪನೆ ಗೊಂಡು ಒಂಬತ್ತು ವರ್ಷದಲ್ಲಿ ವಿವಿಧ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ರಾಜೇಶ್ ಹೇಳಿದರು.ನಿರ್ದೇಶಕ ಶ್ರೀಕಾಂತ್ ಸುವರ್ಣ ಮಾತನಾಡಿ ಸಂಘ ಹಾಗೂ ಸಹಕಾರಿ ಸಂಸ್ಥೆಯು ವಿವಿಧ ಆಯಾಮಗಳೊಂದಿಗೆ ಸಮಾಜದ ಎಲ್ಲರಿಗೂ ಪೂರಕವಾಗುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವುದು ಒಳ್ಳೆಯ ಸಂಗತಿ ಎಂದರು. ಶಾಂತಿನಿಕೇತನದ ರವೀಶ್ ಶೆಟ್ಟಿ , ಗಣೇಶ ಶೆಟ್ಟಿ , ಮಹೇಶ್, ಜಯಕರ್, ಸಂದೇಶ್ ಕುಲಾಲ್, ಕೆ ಗಣೇಶ್, ದೀಕ್ಷಿತ್, ವಿಜಯ್ ಕುಮಾರ್, ನವೀನ್, ರಾಜೇಶ್ರೀ ಪತ್ರಕರ್ತ ನರೇಂದ್ರ ಮರಸಣಿಗೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.