



ಹೆಬ್ರಿ : ಅತ್ಯಂತ ಗ್ರಾಮೀಣ ಪ್ರದೇಶದ ಕುಚ್ಚೂರು ಕುಡಿಬೈಲಿನಲ್ಲಿ ವಿಶೇಷ ಯೋಜನೆ ಯೋಷನೆ ಪರಿಕಲ್ಪನೆಯೊಂದಿಗೆ ೨೦೧೩ರಲ್ಲಿ ಸ್ಥಾಪನೆಗೊಂಡ ಶಾಂತಿನಿಕೇತನ ಯುವ ವೃಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಕೃಷಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಠ ರೀತಿಯಲ್ಲಿ ಸೇವೆ ಸಲ್ಲಿಸಿದ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಲ 2020-21ನೇ ಸಾಲಿನ ಪ್ರಶಸ್ತಿ ದೊರೆತಿದ್ದು ಸೋಮವಾರ ಉಡುಪಿಯಲ್ಲಿ ಜಿಲ್ಲಾಧಿಕಾರಿ ಪ್ರದಾನ ಮಾಡಿದ್ದು ಹೆಬ್ರಿಯಲ್ಲಿ ಶಾಂತಿನಿಕೇತನ ಸದಸ್ಯರು ಸಂಭ್ರಮಾಚರಣೆ ನಡೆಸಿದರು. ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್ ಕುಡಿಬೈಲ್ ಕೃತಜ್ಞತೆ ಸಲ್ಲಿಸಿದರು. ಸಂಘದ ಪೋಷಕರಾದ ಹೆಬ್ರಿ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಭಾರ್ಗವಿ ಆರ್ ಐತಾಳ್, ಅಮೃತಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ, ಪಂಚಾಯಿತಿ ಸದಸ್ಯರಾದ ಹೆಬ್ರಿಯ ಎಚ್.ಜನಾರ್ಧನ್, ಕುಚ್ಚೂರಿನ ಮಹೇಶ ಶೆಟ್ಟಿ, ಮಹೇಶ ಶೆಟ್ಟಿ ಬಾದ್ಲು, ಸಮಾಜಸೇವಕ ಶ್ರೀಕಾಂತ್ ಪೂಜಾರಿ ಮತ್ತಿತರರು ಅಭಿನಂದಿಸಿದರು. ಪ್ರಶಸ್ತಿಯ ಸಂಭ್ರಮಕ್ಕೆ ಶಾಂತಿನಿಕೇತನ ಯುವ ವೃಂದದ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.