



ಮಂಗಳೂರು: ಶಿರಾಡಿ ಘಾಟಿಯಲ್ಲಿ ಘನ ವಾಹನಗಳ ಸಂಚಾರವನ್ನುನಿಷೇಧಿಸಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ದೋಣಿಗಲ್ ಸಮೀಪದ ಲ್ಲಿ ಭೂಕುಸಿತ ಶಿರಾಡಿ ಘಾಟ್ ಸಣ್ಣ ವಾಹನಗಳಿಗೆ ಜುಲೈ 17 ರಿಂದ ಅವಕಾಶ ನೀಡಲಾಗಿದೆ
ಕಾರುಗಳು, ಜೀಪು, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು, ಅಂಬುಲೆನ್ಸ್ ಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.ವೇಗದ ಮಿತಿಯನ್ನು ಗಂಟೆಗೆ ೩೦ ಕಿ ಮೀ ನಂತೆ, ಸಕಲೇಶಪುರ-ಆನೆಮಹಲ್-ಕ್ಯಾನಹಳ್ಳಿ-ಜಿನ್ನಳ್ಳಿ-ಕಡಗರವಳ್ಳಿ- ಮಾರನಹಳ್ಳಿಯ ಮಾರ್ಗವಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಮಂಗಳೂರಿನತ್ತ ಸಂಚರಿಸುವುದಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವುದಾದರೆ ಮಾರನಹಳ್ಳಿ- ಕಾಡುಮನೆ- ಹಾರ್ಲೆ-ಕೂಡಿಗೆ- ಆನೆಮಹಲ್- ಸಕಲೇಶಪುರ ಮಾರ್ಗವಾಗಿ ಬೆಂಗಳೂರಿನತ್ತ ಸಂಚರಿಸಬಹುದಾಗಿದೆ. ಪರ್ಯಾಯ ಕಲ್ಪಿಸಲಾದ ಎರಡೂ ರಸ್ತೆಗ್ಲಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.