



ಕಾರ್ಕಳ:
ಶಿರ್ಡಿ ಸಾಯಿ ಪದವಿ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟ ಇಂಟೀರಿಯರ್ ಡಿಸೈನ್ ಆಂಡ್ ಡೆಕೋರೇಶನ್ ಎಂಬ ವ್ರತ್ತಿಪರ ಪದವಿ ಅಥವಾ ಕೋರ್ಸ್ ವಿಷಯದಲ್ಲಿ 3 ವರ್ಷಗಳ ಪೂರ್ಣ ಪ್ರಮಾಣದ ಕಾಲೇಜನ್ನು 2014 ರಲ್ಲಿ ಉಡುಪಿ ಜಿಲೆಯಲ್ಲಿಯೇ ಪ್ರಥಮ ಬಾರಿಗೆ ಪ್ರಾರಂಭಿಸಿರುತ್ತದೆ. ದ್ವಿತೀಯ ಪಿಯುಸಿ ಬಳಿಕ ಕಲಾ, ವಾಣಿಜ್ಯ ಹಾಗೂ ವಿಜ್ನಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಏನಿದು ಇಂಟೀರಿಯರ್ ಡಿಸೈನ್ ಆಂಡ್ ಡೆಕೋರೇಶನ್...? ಒಳಾಂಗಣ ವಿನ್ಯಾಸ ಅಥವಾ ಇಂಟೀರಿಯರ್ ಡಿಸೈನ್ ಪ್ರಸ್ತುತ ಮತ್ತು ಮುಂಬರುವಂತಹ ದಿನಗಳಲ್ಲಿ ಭಾರತ ಮತ್ತು ವಿದೇಶ(ಜಗತ್ತಿನಾದ್ಯಂತ) ಬಹಳ ಬೇಡಿಕೆಯ ಶೈಕ್ಷಣಿಕ ಕಾರ್ಯಕ್ರಮ ಇದಾಗಿದೆ. ಇದರಲ್ಲಿ ಮುಖ್ಯವಾಗಿ ಮನೆ, ಕಚೇರಿ, ದೊಡ್ಡ ಮಟ್ಟದ ಪಂಚತಾರ ಹೋಟೇಲ್ ಗಳು, ಕಾರ್ಪೊರೇಟ್ ಕಚೇರಿಗಳು, ಶೋರೂಂಗಳ ಒಳಾಂಗಣ ವಿನ್ಯಾಸವನ್ನು ಮಾಡುವುದೇ ಇಂಟೀರಿಯರ್ ಡಿಸೈನ್ ಆಂಡ್ ಡೆಕೋರೇಶನ್. ಇಂಟೀರಿಯರ್ ಡಿಸೈನ್ ಪ್ರಸ್ತುತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವಂತಹ ಕ್ಷೇತ್ರ. ಸಿವಿಲ್ ಇಂಜೀನಿಯರ್ ಗಳು ಕಟ್ಟಡದ ವಿನ್ಯಾಸ ಹಾಗೂ ಕಾಮಗಾರಿಗಳನ್ನು ಪೂರ್ತಿಗೊಳಿಸಿದ ನಂತರ ಆ ಕಟ್ಟಡದ ಒಳಾಂಗಣ ಕೆಲಸಗಳಾದ Flooring, Painting, Furniture Design, Lighting, Fabrics, Bathroom, Master Bedroom, Kitchen Etc.... ಗಳ ವಿನ್ಯಾಸವನ್ನು ಹಾಗೂ ಕೆಲಸವನ್ನು ಬಹಳ ನೈಪುಣ್ಯತೆಯಿಂದ ಇಂಟೀರಿಯರ್ ಡಿಸೈನ್ ಪೂರ್ತಿಗೊಳಿಸಿರುವಂತಹ ವಿದ್ಯಾರ್ಥಿಗಳು ಮಾಡುತ್ತಾರೆ.
ಇಂಟೀರಿಯರ್ ಡಿಸೈನ್ ಕೋರ್ಸಿನ ಪಠ್ಯಕ್ರಮಗಳು ಹೇಗಿದೆ...? ಇಂಟಿರಿಯರ್ ಡಿಸೈನ್ ವ್ರತ್ತಿ ಪರ ಶಿಕ್ಷಣ ಅಥವಾ ಕೋರ್ಸ್ 3 ವರ್ಷದ ಪಠ್ಯಕ್ರಮವನ್ನು ಹೊಂದಿದೆ. ಈ ಕೋರ್ಸನ್ನು ದ್ವಿತೀಯ ಪಿಯುಸಿ ಮುಗಿಸಿದ ಕಲಾ, ವಾಣಿಜ್ಯ ಹಾಗೂ ವಿಜ್ನಾನ ವಿಭಾಗದ ವಿದ್ಯಾರ್ಥಿಗಳು ಕಲಿಯಬಹುದಾಗಿದೆ. ಪ್ರಾಯೋಗಿಕ ವಿಷಯಗಳಿಗೆ (Practical Subject) ಜಾಸ್ತಿ ಒತ್ತನ್ನು ನೀಡಲಾಗುತ್ತದೆ. ವಿಜ್ನಾನ ಮತ್ತು ಗಣಿತದದ ವಿಷಯಗಳು ಇರುವುದಿಲ್ಲಾ. 3 ವರ್ಷದಲ್ಲಿ ಒಟ್ಟು 6 ಸೆಮಿಸ್ಟರ್ ಗಳನ್ನು ಹೊಂದಿರುತ್ತದೆ. 4 ಸೆಮಿಸ್ಟರ್ ಪೂರ್ತಿಗೊಳಿಸಿದ ವಿದ್ಯಾರ್ಥಿಗಳು 2 ತಿಂಗಳುಗಳ ಕಾಲ Inhouse Training or Internship ತರಬೇತಿಗಾಗಿ ಬೇರೆ ಬೇರೆ ಪ್ರತಿಷ್ಟಿತ ಇಂಟೀರಿಯರ್ ಡಿಸೈನ್ ಅಥವಾ ಆರ್ಕಿಟೆಕ್ಟ್ ಕಂಪನಿಗಳಿಗೆ ದಾಖಲಾಗುತ್ತಾರೆ. ತುಂಬಾ ಸುಲಭದಲ್ಲಿ ವ್ರತ್ತಿಪರ ಪದವಿ ಶಿಕ್ಷಣವನ್ನು ಹಾಗೂ ಉದ್ಯೋಗವನ್ನು ಪಡೆಯಬಹುದಾದಂತಹ ಕೋರ್ಸ್ ಇದಾಗಿದೆ.
ಇಂಟೀರಿಯರ್ ಡಿಸೈನ್ ಕೋರ್ಸ್ ಪೂರ್ತಿಗೊಳಿಸಿದ ಮೇಲೆ ಉದ್ಯೋಗ ಅವಕಾಶಗಳು ಹೇಗೆ..? ಪ್ರಸ್ತುತ ಭಾರತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವಂತಹ ಆರ್ಥಿಕತೆ ಆದುದರಿಂದ ಮೂಲ ಸೌಕರ್ಯಗಳ ಕಾಮಗಾರಿಯು ವೇಗ ಪಡೆದುಕೊಂಡಂತೆ ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿ ತುಂಬಾ ಉದ್ಯೋಗ ಅವಕಾಶಗಳು ಸ್ರಷ್ಟಿಯಾಗುತ್ತಿದೆ. ನಮ್ಮ ರಾಜ್ಯದಲ್ಲಿ ಇಂಟೀರಿಯರ್ ಡಿಸೈನ್ ಶಿಕ್ಷಣದಲ್ಲಿ ಪದವಿ ನೀಡುವ ಶಿಕ್ಷಣ ಸಂಸ್ಥೆಗಳು ಕಡಿಮೆ ಇರುವುದರಿಂದ ಪ್ರತಿ ವರ್ಷ ಕೇವಲ 500 ರಿಂದ 600 ವಿದ್ಯಾರ್ಥಿಗಳು ಮಾತ್ರ ಪದವಿ ಪಡೆದು ಹೊರಗೆ ಹೋಗುತ್ತಾರೆ. ಆದುದರಿಂದ ಯಾವುದೇ ಸ್ಪರ್ಧೆಯಿಲ್ಲದೆ ಬಹಳ ಸುಲಭವಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ನೀಡುವಂತಹ Junior Architect, Principal Designer, Site Engineer ಹೀಗೆ ಅನೇಕ ಹುದ್ದೆಗಳನ್ನು ನಮ್ಮ ದೇಶದ ಹಾಗೂ ವಿದೇಶದ ಪ್ರತಿಷ್ಟಿತ ಕಂಪನಿಗಳಲ್ಲಿ ಪಡೆಯಬಹುದಾಗಿದೆ. ಅದಲ್ಲದೆ ಇಂಟೀರಿಯರ್ ಡಿಸೈನ್ ಪದವಿ ಪೂರ್ತಿಗೊಳಿಸಿರುವಂತಹ ವಿದ್ಯಾರ್ಥಿಗಳು ಸ್ವಂತ ಉದ್ಯಮವನ್ನು ಕೂಡ ಪ್ರಾರಂಭಿಸ ಬಹುದಾಗಿದೆ. ಇತ್ತೀಚೆಗೆ KPSC ಮೂಲಕ ಇಂಟೀರಿಯರ್ ಡಿಸೈನ್ ಪದವಿ ಪೂರ್ತಿಗೊಳಿಸಿರುವಂತಹ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಎಂಬುವುದು ಗಮನಾರ್ಹ ಸಂಗತಿಯಾಗಿದೆ.
ಶಿರ್ಡಿ ಸಾಯಿ ಪದವಿ ಕಾಲೇಜನ್ನು ಯಾಕೆ ಆಯ್ಕೆ ಮಾಡಬೇಕು..? 1.ಇಂಟೀರಿಯರ್ ಡಿಸೈನ್ ಆಂಡ್ ಡೆಕೋರೇಶನ್ ಕೋರ್ಸಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿಯೇ ಅತ್ಯಂತ ಯಶಸ್ವಿಯಾಗಿ ಕೋರ್ಸನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆ ಇದಾಗಿದೆ. 2.ರಾಜ್ಯದ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳೂ ಸಹ ಈ ಶಿಕ್ಷಣ ಸಂಸ್ಥೆಯಲ್ಲಿ ಇಂಟೀರಿಯರ್ ಡಿಸೈನ್ ಕೋರ್ಸನ್ನು ಕಲಿಯುತ್ತಿದ್ದಾರೆ. 3.ಇಂಟೀರಿಯರ್ ಡಿಸೈನ್ ಕ್ಷೇತ್ರದಲ್ಲಿ ಶೇ.100 ರಷ್ಟು ಯಶಸ್ವಿಯಾಗಿ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ತೆಗೆಸಿಕೊಟ್ಟಿರುವಂತಹ ಶಿಕ್ಷಣ ಸಂಸ್ಥೆಯ ಎಂಬುವುದು ಹೆಮ್ಮೆ. 4.ಇಂಟೀರಿಯರ್ ಡಿಸೈನ್ ಆಂಡ್ ಡೆಕೋರೇಶನ್ ಕ್ಷೇತ್ರದಲ್ಲಿ 100% ಉದ್ಯೋಗವನ್ನು ವಿದ್ಯಾರ್ಥಿಗಳಿಗೆ ತೆಗೆಸಿಕೊಟ್ಟು ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕಾರಣೀಭೂತವಾದ ಶಿಕ್ಷಣ ಸಂಸ್ಥೆಗೆ "BEST PLACEMENT AMOGST INTERIOR DESIGN COLLEGE" ಎನ್ನುವ ಪ್ರಶಸ್ತಿಯು ಲಭಿಸಿದೆ. 5.ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1st, 2nd ಮತ್ತು 3rd Rank ಅನ್ನು ಶಿರ್ಡಿ ಸಾಯಿ ಪದವಿ ಕಾಲೇಜು ಕಾರ್ಕಳದ ವಿದ್ಯಾರ್ಥಿಗಳು ಪಡೆದಿರುವುದು ಹೆಮ್ಮೆ. 6.ದ್ವಿತೀಯ ವರ್ಷದ ಇಂಟೀರಿಯರ್ ಡಿಸೈನ್ ಕೋರ್ಸನ್ನು ಕಲಿಯುವ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಮಾಡಿಸಿಕೊಡುವಂತಹ ಹಾಗೂ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಂತಹ ಹೆಮ್ಮೆಯ ಶಿಕ್ಷಣ ಸಂಸ್ಥೆ. 7.ಉಚಿತವಾದಂತಹ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯು ಈ ಶಿಕ್ಷಣ ಸಂಸ್ಥೆಗೆ ದಾಖಲಾದಂತಹ ವಿದ್ಯಾರ್ಥಿಗಳಿಗೆ ಸಿಗುತ್ತದೆ. 8.ಕಾಲೇಜು ಶುಲ್ಕವನ್ನು ಪಾವತಿಸಲು ಕಷ್ಟ ಇರುವಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲದ ವ್ಯವಸ್ಥೆಯು ಇದೆ. 9. ವಿದ್ಯಾರ್ಥಿಗಳಿಗೆ ಉದ್ಯೋಗದ ಸಹಕಾರಿಯಾಗಿ "Association for Indian Interior Design" ಗುಜರಾತ್ ಸಂಸ್ಥೆಯಿಂದ ಮಾನ್ಯತೆ ಪಡೆದ ರಾಜ್ಯದ ಪ್ರಥಮ ಶಿಕ್ಷಣ ಸಂಸ್ಥೆ.
ಕಾಲೇಜು ವಿಳಾಸ:
ಶಿರ್ಡಿ ಸಾಯಿ ಡಿಗ್ರಿ ಕಾಲೇಜು ಸುವರ್ಣ ಭೂಮಿ ಶಿರ್ಡಿ ಸಾಯಿ ಬಾಬ ಮಂದಿರ ಹತ್ತಿರ ಪೆರುವಾಜೆ ರಸ್ತೆ ಕಾರ್ಕಳ ಸಂಪರ್ಕ:
8277392576, 9886831069, 6362124310
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.