



ಕಾರ್ಕಳ : ಶಿರ್ಲಾಲು ಗ್ರಾಮ ಪಂಚಾಯತದಲ್ಲಿ ಕಡತ ಕಳ್ಳತನ ಮಾಡುವುದು ಸಿಸಿ ಟಿವಿಯಲ್ಲಿ ದಾಖಲಾಗಿದ್ದರೂ ಅವರನ್ನು ರಕ್ಷಿಸಲು ಹೊರಟಿರುವ ಕಾಂಗ್ರೇಸ್ ಪಕ್ಷ ಕಳ್ಳರಿಗೆ ಬೆಂಬಲ ನೀಡುವ ಪಕ್ಷ ಎಂಬುದು ಸಾಬೀತಾದಂತಾಗಿದೆ ಎಂದು ಬಿಜೆಪಿ ಪ್ರದಾನ ಕಾರ್ಯದರ್ಶಿ ನವೀನ್ ನಾಯಕ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ದಿಗಾಗಿ ಕೋಟ್ಯಾಂತರ ಅನುದಾನವನ್ನು ಸಚಿವ ಸುನಿಲ್ ಕುಮಾರ್ ಮಂಜೂರು ಮಾಡಿದ್ದಾರೆ. ಜನತೆಯ ಬಹಳಷ್ಟು ಸಮಸ್ಯೆಗಳು ಪರಿಹಾರ ಕಂಡಿವೆ. ಆದರೆ ಇದ್ಯಾವುದರ ಅರಿವೇ ಇಲ್ಲದ ಕಾಂಗ್ರೇಸ್‌ಗೆ ಈಗ ಕಳ್ಳತನದ ವಿಚಾರವೇ ಪ್ರಚಾರದ ವಸ್ತುವಾಗಿರುವುದು ಹಾಸ್ಯಾಸ್ಪದ. ಗ್ರಾಮ ಪಂಚಾಯತದ ಸಾಮಾನ್ಯ ಸಭೆ ಫೆಬ್ರವರಿ ೧೭ರಂದು ನಡೆದಾಗ ಆ ಸಭೆಯಲ್ಲಿ ಕಾಂಗ್ರೇಸ್ ಬೆಂಬಲಿತ ಸದಸ್ಯರಾದ ೩ ಮಂದಿ ದಾಖಲೆ ಕಳ್ಳತನ ಮಾಡಿರುವುದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಆ ಸಿಸಿಟಿವಿಯಲ್ಲಿನ ವಿವರಗಳನ್ನು ಗಮನಿಸಿ ಆ ಗ್ರಾಮ ಪಂಚಾಯತದ ಅಭಿವೃದ್ದಿ ಅಧಿಕಾರಿಯವರು ಪೋಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಗ್ರಾಮ ಪಂಚಾಯತ್‌ನ ಕಾಂಗ್ರೇಸ್ ಬೆಂಬಲಿತರ ಮೇಲೆ ಕೇಸು ದಾಖಲಿಸಿದ್ದಾರೆ. ಆದರೆ ಕಳ್ಳತನದ ಬಗ್ಗೆ ದಾಖಲೆಗಳಿದ್ದರೂ ಕಾಂಗ್ರೇಸ್ ಈ ವಿಚಾರದಲ್ಲಿ ಕಳ್ಳತನ ಮಾಡಿದವರಿಗೆ ಬುದ್ದಿ ಹೇಳುವ ಬದಲು ಅಧಿಕಾರಿಗಳಿಗೆ ಬೆದರಿಕೆ ಹಾಕುವಂತಹದ್ದು ಕಾಂಗ್ರೇಸ್ ನಿಲುವು ಎಂತಹದ್ದು ಎಂದು ಸಾಬೀತಾಗಿದೆ. ಕಳೆದ ೬೦ ವರ್ಷಗಳಿಂದ ದೇಶವನ್ನೇ ಕಾಂಗ್ರೇಸ್ ಕೊಳ್ಳೆ ಹೊಡೆದಿದೆ. ಅಭಿವೃದ್ದಿ ವಿಚಾರದಲ್ಲಿ ಕಾರ್ಕಳದಲ್ಲಿ ಬಹಳಷ್ಟು ಸಾಧನೆಯಾಗಿದೆ. ಆದರೆ ಕಾಂಗ್ರೇಸ್‌ಗೆ ಮಾತ್ರ ಇದ್ಯಾವುದರ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದು . ಇದೀಗ ಕಾರ್ಕಳ ತಾಲೂಕಿನಲ್ಲೂ ಅದೇ ಚಿಂತನೆಯನ್ನು ಮುಂದುವರಿಸಿ ಕಡತ ಕಳ್ಳರಿಗೆ ಬೆಂಬಲ ಸೂಚಿಸಿ ಕಾಂಗ್ರೇಸ್‌ನ ಸಿದ್ದಾಂತವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.