logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಶಿರ್ಲಾಲು : ಲಕ್ಷಾಂತರ ಮೌಲ್ಯ ದ ಚಿನ್ನಾಭರಣ ಕಳವು

ಟ್ರೆಂಡಿಂಗ್
share whatsappshare facebookshare telegram
25 Jun 2022
post image

ಕಾರ್ಕಳ :ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಸೂರ್ಯಂತೊಕ್ಲು ಚೆನ್ನಪ್ಪ ಎಂಬವರ ಮನೆಯಲ್ಲಿ ಜೂ.24 ನಡೆದಿದೆ.

. ಜೂ. 24ರಂದು ಸಂಜೆ 4:30 ಗಂಟೆಗೆ ಮನೆಗೆ ಬೀಗ ಹಾಕಿ ಚೆನ್ನಪ್ಪ ಅವರು ಅವರ ಹೆಂಡತಿಯೊಂದಿಗೆ ಮಾಳದಲ್ಲಿರುವ ಮಾವನ ಮನೆಗೆ ತೆರಳಿದ್ದ ವೇಳೆಕಳ್ಳತನ ವಾಗಿದೆ . ಜೂ. 25ರಂದು ಬೆಳಿಗ್ಗೆ 7 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಕಳ್ಳರು ಮನೆ ಎದುರಿನ ಬಾಗಿಲಿನ ಚಿಲಕದ ಕೊಂಡಿ ತುಂಡು ಮಾಡಿ ಒಳಗೆ ಪ್ರವೇಶಿಸಿ. ಕೋಣೆಯಲ್ಲಿದ್ದ ಕಪಾಟಿನ ಬಾಗಿಲು ಮುರಿದು ವಸ್ತುಗಳನ್ನು ಜಾಲಾಡಿದ್ದಾರೆ. ಲಾಕರ್ ನಲ್ಲಿದ್ದ 6 ಪವನ್ ತೂಕದ ಕರಿಮಣಿ ಸರ, 5 ಪವನಿನ ಹವಳದ ಚೈನ್, 2 ಪವನಿನ 2 ಜೊತೆ ಉಂಗುರ, 4 ಪವನಿನ ಬ್ರಾಸ್ಕೆಟ್, 4 ಪವನಿನ ಚೈನ್, 1 ಪವನಿನ ಲೇಡಿಸ್ ಉಂಗುರ, 2 ಪವನಿನ ಕಿವಿಯೋಲೆ 2 ಜೊತೆ, 1 ಪವನಿನ ಜಂಟ್ಸ್ ಉಂಗುರ ಸೇರಿದಂತೆ ಒಟ್ಟು 8 ಲಕ್ಷ ರೂ. ಮೌಲ್ಯದ 200 ಗ್ರಾಂ. ಚಿನ್ನ ಕಳವಾಗಿದೆ. 75 ಸಾವಿರ ನಗದು ಕಳ್ಳತನವಾಗಿದೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.