



ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಗ್ರಾಮಸ್ಥರ ನಡುವೆ ಪರಸ್ಪರ ಹೊಡೆದಾಟ ವಾಗಿದೆ ನಡೆದಿದೆ ಶಿರ್ಲಾಲು ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ವಿಷಯಕ್ಕೆ ಗ್ರಾಮಸ್ಥರ ನಡುವೆ ಪರಸ್ಪರ ಹೊಡೆದಾಟ ನಡೆದ ಘಟನೆ ಇಂದು ನಡೆಯಿತು. ಮುಂಡ್ಲಿ ಗ್ರಾಮದ ಮಹಿಳೆ ಕುಡಿಯುವ ನೀರು ಒದಗಿಸುವಂತೆ ಪಂಚಾಯತ್ ಗೆ ಮನವಿ ಮಾಡಿದಾಗ ಸ್ಥಳಿಯ ಪಂಚಾಯತ್ ಸದಸ್ಯರು ವಿರೋಧ ಮಾಡಿದ್ದು ಆಗ ಗ್ರಾಮಸ್ಥರ ನಡುವೆ ೨ ಗುಂಪುಗಳಾಗಿ ಪರಸ್ಪರ ಹೊಡೆದಾಟ ನಡೆದಿದೆ. ನಂತರ ಅಜೆಕಾರು ಪೊಲೀಸ್ ಠಾಣಾಧಿಕಾರಿ ಹಾಗು ಸಿಬಂದಿ ಸಭೆಗೆ ಬಂದು ಹೊಡೆದಾಟ ನಡೆಸಿದವರನ್ನು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೊಗಿದ್ದಾರೆ. ಈ ವೇಳೆ ಗಲಾಟೆ ಮಾಡಿದವರು ಸಬೆಯಲ್ಲಿದ್ದ ಚಯರ್ಗಳಿಗೆ ಹಾನಿ ಮಾಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.