



ಹೆಬ್ರಿ : ಗ್ರಾಮದ ಎಲ್ಲರ ಜೀವನ ಜೀರ್ಣೋದ್ಧಾರಗೊಳ್ಳುವ ಮೂಲಕ ಊರಿನ ದೇವಸ್ಥಾನದ ಜೀರ್ಣೋದ್ಧಾರದ ಪುಣ್ಯದ ಕಾರ್ಯ ಅತೀ ಶೀಘ್ರವಾಗಿ ಈಡೇರಲಿ, ಊರು ಸುಭಿಕ್ಷೆಯಾಗಲಿ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು.
ಅವರು ಶನಿವಾರ ಶಿವಪುರ ಶಂಕರದೇವ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಪೇಜಾವರ ಮಠದ ಶಿವಪುರ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಕಾಣಿಕೆ ಸಮರ್ಪಿಸಿದರು. ಬಳಿಕ ಶಿವಪುರ ಕೆರೆಬೆಟ್ಟಿನಲ್ಲಿ ಸುಮಾರು ೧೩ ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಸರ್ಕಾರಿ ಗೋಶಾಲೆಯ ಜಮೀನು ವೀಕ್ಷಣೆ ಮಾಡಿದರು. ಹೆಬ್ರಿಯ ಗಿಲ್ಲಾಳಿ ವಿಶ್ವೇಷಕೃಷ್ಣ ಗೋಶಾಲೆಗೆ ಬೇಟಿ ನೀಡಿದರು. ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ, ಶಿವಪುರದ ಮುಖಂಡ ಸುರೇಶ ಶೆಟ್ಟಿ, ಬಿಜೆಪಿ ನಾಯಕ ಹೆಬ್ರಿ ಗುರುದಾಸ ಶೆಣೈ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ಶಿವಪುರ ಶಂಕರದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ಅಡಿಗ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವ ಭಟ್, ಸಮಿತಿಯ ಸದಸ್ಯರು, ಸ್ಥಳೀಯ ಗಣ್ಯರು, ಅರ್ಚಕರ ಪ್ರಮುಖರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.