



ಹೆಬ್ರಿ: ಜೆಸಿಐ ಹೆಬ್ರಿ, ಶಿವಪುರ ಹಾಲು ಉತ್ಪಾದಕರ ಸಂಘ, ಹಾಗೂ ಕಸ್ತೂರ್ಬ ಆಸ್ಪತ್ರೆ ಮಣಿಪಾಲ ಹಾಗು ಇತರ ಸಂಘಟನೆಗಳ ಸಹಬಾಗಿತ್ವದೊಂದಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರವು ಫೆ.27 ರಂದು ಶಿವಪುರ ಹಾಲು ಉತ್ಪಾದಕರ ಸಂಘದ ವಠಾರದಲ್ಲಿನಡೆಯಿತು . ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಜೆಸಿಐ ಹೆಬ್ರಿಯ ಪೂರ್ವಧ್ಯಕ್ಷರು ಹಾಗೂ ಶಿವಪುರ ಶಂಕರ ದೇವಸ್ಥಾನದ ಧರ್ಮದರ್ಶಿಗಳಾದ ಜೆಸಿ ಮಹಾಭಲೇಶ್ವರ ಅಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .ಮುಖ್ಯ ಅತಿಥಿ ಜೆಸಿಐ ಹೆಬ್ರಿಯ ಅಧ್ಯಕ್ಷ ಜೆಸಿ ರೂಪೇಶ್ ನಾಯ್ಕ್ ಮಾತನಾಡಿ ರಕ್ತದಾನದ ಮಹತ್ವವನ್ನು ವಿವರಿಸಿ ಯುವಜನತೆ ರಕ್ತದಾನ ಕ್ಕೆ ಪ್ರೇರಣೆ ಯಾಗಬೇಕು ಎಂದು ಕರೆನೀಡಿದರು. ., ಪೂರ್ವಧ್ಯಕ್ಷರಾದ ಜೆಸಿ ರಾಮಕೃಷ್ಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು ಪೂರ್ವಧ್ಯಕ್ಷರಾದ ಜೆಸಿ ಪುಟ್ಟಣ್ಣ ಭಟ್ ಪ್ರಾಸ್ತವಿಕ ಮಾತನಾಡಿದರು, ಕಾರ್ಯಕ್ರಮ ದಲ್ಲಿ ಜೆಸಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು, ಜೆಸಿಯ ಸದಸ್ಯರು ಹಾಗು ಒಕ್ಕೂಟದ ಸದಸ್ಯರು ಸಾರ್ವಜನಿಕರು ರಕ್ತದಾನದಲ್ಲಿ ಭಾಗವಹಿಸಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.