



ನವದೆಹಲಿ: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ನಡೆಯುವ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ತಾನು ಶ್ರೀಮಂತ ಎಂದು ಬಿಂಬಿಸಿಕೊಂಡ ವ್ಯಕ್ತಿಯೊಬ್ಬ ಮ್ಯಾಟ್ರಿಮೋನಿಯಲ್ ಮೂಲಕ ಪರಿಚಯವಾದ ಮಹಿಳೆಯ ನಂಬಿಕೆ ಗಳಿಸಿ, ಆಕೆಯಿಂದ ಹಣ ಪಡೆದು ವಂಚಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಉತ್ತರಪ್ರದೇಶದ ಮುಜಫರ್‌ನಗರ ನಿವಾಸಿಯಾದ ವಿಶಾಲ್(26), ದೆಹಲಿಯಲ್ಲಿ ಬಿಸಿಎ ಮತ್ತು ಎಂಬಿಎ ಪದವಿ ಪಡೆದಿದ್ದಾನೆ. 2018ರಲ್ಲಿ ಗುರುಗ್ರಾಮದ ಎಂಎನ್‌ಸಿ ಕಂಪನಿಯಲ್ಲಿ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದ. ನಂತರ 2021ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ರೆಸ್ಟೋರೆಂಟ್ ಆರಂಭಿಸಿದ್ದಾನೆ. ಆದರೆ ಇದು ಅಂದುಕೊಂಡಂತೆ ಯಶಸ್ಸು ಗಳಿಸಿಲಿಲ್ಲ. ಹೀಗಾಗಿ ಸುಲಭದಲ್ಲಿ ದುಡ್ಡು ಗಳಿಸಲು ಮ್ಯಾಟ್ರಿಮೋನಿಯಲ್ ಮೂಲಕ ಯುವತಿಯರನ್ನು ವಂಚಿಸುವ ದಂಧೆಗೆ ಇಳಿದಿದ್ದಾನೆ. ಕೆಲವು ತಿಂಗಳ ಹಿಂದೆ ಮ್ಯಾಟ್ರಿಮೋನಿಯಲ್ ಮೂಲಕ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡಿದ್ದಾನೆ. ತಾನು ಎಚ್‌ಆರ್ ಮ್ಯಾನೇಜರ್ ಎಂದು, ವಾರ್ಷಿಕ 70 ಲಕ್ಷ ರೂ. ಸಂಬಳ ಎಂದು ತಿಳಿಸಿದ್ದಾನೆ. ಅಲ್ಲದೇ ನಂಬಿಕೆ ಜಾಸ್ತಿಯಾಗಲು ದಿನಕ್ಕೆ 2,500 ರೂ. ಬಾಡಿಗೆಗೆ ಐಷಾರಾಮಿ ಕಾರುಗಳನ್ನು ಪಡೆದು, ಫೋಟೋಗಳನ್ನು ಕಳುಹಿಸಿದ್ದಾನೆ. ಅಲ್ಲದೇ ವಿಲ್ಲಾಗಳ ಫೋಟೋಗಳನ್ನು ಕಳುಹಿಸಿದ್ದಾನೆ.
ನಂತರ ಕಡಿಮೆ ಬೆಲೆಗೆ ಐಫೋನ್ 14 ಪ್ರೋ ಮ್ಯಾಕ್ಸ್ ಕೊಡಿಸುವುದಾಗಿ, ಯುವತಿಗೆ ಮತ್ತು ಆಕೆಯ ಸಂಬಂಧಿಕರಿಗೆ ತಿಳಿಸಿದ್ದಾನೆ. ಇದಕ್ಕಾಗಿ ಯುವತಿಯಿಂದ 3.05 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡು, ಬಳಿಕ ಫೋನ್ ಸ್ವಿಚ್x ಆಫ್ ಮಾಡಿಕೊಂಡಿದ್ದಾನೆ. ಯುವತಿಗೆ ತಾನು ಮೋಸ ಹೋಗಿರುವುದು ತಿಳಿದು, ದೆಹಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ ಪೊಲೀಸರು ಅವನ ಹಾದಿಯಲ್ಲೇ ಹೋಗಿ, ಮ್ಯಾಟ್ರಿಮೋನಿಯಲ್ ಮೂಲಕ ಆತನನ್ನು ಪರಿಚಯಿಸಿಕೊಂಡು, ಬಲೆಗೆ ಕೆಡವಿದ್ದಾರೆ!
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.