



ಕಾರ್ಕಳ: ಜಿಲ್ಲಾ ಮಲೆಕುಡಿಯ ಸಂಘ (ರಿ.),ಉಡುಪಿ ಇದರ ವತಿಯಿಂದ, ಇತ್ತೀಚೆಗೆ ನಿಧನರಾದ ಸಂಘದ ಅಧ್ಯಕ್ಷರಾದ ದಿ| ಸುಂದರ ಗೌಡ ಬಲ್ಲಾಡಿ ಇವರ ಶ್ರದ್ಧಾಂಜಲಿ ಸಭೆಯು ಡಿ.5 ರಂದು ಪೇರಡ್ಕ ಜಿಲ್ಲಾ ಸಂಘದ ಕೇಂದ್ರ ಕಛೇರಿ ವಠಾರ ದಲ್ಲಿ ನಡೆಯಿತು. ಸಾಮಾಜಿಕ ಧಾರ್ಮಿಕ,ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು,ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿ|ಸುಂದರ ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು, ಸಂಘಟನಾ ಕಾರ್ಯದರ್ಶಿ ಗಂಗಾಧರ ಗೌಡ ಈದು, ಜಿಲ್ಲಾ ಉಪಾಧ್ಯಕ್ಷರಾದ ಗೋಪಾಲ್ ಗೌಡ ಎತ್ತಲ್ ಗುಡ್ಡೆ, ಪ್ರಧಾನ ಕಾರ್ಯದರ್ಶಿ ಸಾಧು ಗೌಡ ನಾರ್ಜೆ, ಕೋಶಾಧಿಕಾರಿ ವಿಷ್ಣುಮೂರ್ತಿ ಕೆರ್ವಾಶೆ, ಪ್ರಕಾಶ್ ಅಂಡಾರು, ಸುಂದರ್ ರೆಂಜಾಳ,ಅಶೋಕ್ ಕೆರ್ವಾಶೆ, ಸತೀಶ್ ಪಾರಿಕಲ್ಲು,ವೀರಪ್ಪ ಪೇರಡ್ಕ, ದಿನೇಶ್ ನೂರಾಳ್ ಬೆಟ್ಟು,ಮತ್ತು ಗ್ರಾಮ ಸಮಿತಿಯ ಪದಾಧಿಕಾರಿಗಳು, ಹಾಗೂ ದಿ|ಸುಂದರ ಗೌಡರ ಕುಟುಂಬಸ್ಥರು,ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು, ಅಶೋಕ್ ಕೆರ್ವಾಶೆ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.