



ಬೈಲೂರು: ಬೈಲೂರು ಬೀದಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಶ್ರೀ ಮಹಾಲಿಂಗೇಶ್ವರ ದೇವರ ಸಾನ್ನಿಧ್ಯ ಸಂಕೋಚ ಕಾರ್ಯಕ್ರಮವು ಜು.9 ಮತ್ತು 10 ರಂದು ಬ್ರಹ್ಮಶ್ರೀ ಬೈಲೂರು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು: ಜು.9 ರಂದು ಸಾಯಂಕಾಲ 5ರಿಂದ ದೇವತಾ ಪ್ರಾರ್ಥನೆ, ಪುಣ್ಯಹವಾಚನ, ಮೂಲಾಲಯದಲ್ಲಿ ವಾಸ್ತು ಪೂಜಾ, ಬಲಿ, ವಾಸ್ತು ಹೋಮ, ಪ್ರಾಕಾರ ಬಲಿ, ಬಾಲಾಲಯದಲ್ಲಿ ಸಪ್ತಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ಬಲಿ, ವಾಸ್ತು ಹೋಮ, ಪ್ರಾಕಾರ ಬಲಿ ನಡೆಯಲಿದೆ. ಜು. 10 ರಂದು ಬೆಳಿಗ್ಗೆ 5:30ರಿಂದ ಪುಣ್ಯಹವಾಚನ, ಗಣಯಾಗ, ಪಂಚವಿಂಶತಿ, ಕಲಶ ಪ್ರಧಾನ ಹೋಮ, ಸಂಹಾರ ತತ್ವ ಹೋಮ, ಗಣಪತಿ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಪ್ರಸನ್ನ ಪೂಜೆ, 8:30 ಕ್ಕೆ ಸಂಕೋಚ ಕಲಶಾಭಿಷೇಕ ಮಹಾಲಿಂಗೇಶ್ವರ ದೇವರ ಧ್ಯಾನ ಸಂಕೋಚ, ಮಹಾ ಗಣಪತಿ ದೇವರ ಬಿಂಬ ಬಾಲಾಲಯ ಪ್ರತಿಷ್ಠೆ, ಶಿಲಾ ಮುಹೂರ್ತ, ಪ್ರಸಾದ ವಿತರಣೆ ನಡೆಯಲಿದೆ. ಪುಣ್ಯ ಕಾರ್ಯದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ಜೀಣೋದ್ಧಾರ ಸಮಿತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಗ್ರಾಮಸ್ಥರು ವಿನಂತಿಸಿದ್ದಾರೆ ಶಿಲಾ ಮೆರವಣಿಗೆ: ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾಮುಹೂರ್ತದ ಪೂರ್ವಭಾವಿಯಾಗಿ ಶಿಲಾ ಮೆರವಣಿಗೆಯು ಜು.9 ರಂದು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಬೈಲೂರು ಕೆಳಪೇಟೆಯಿಂದ ನಡೆಯಲಿದೆ. ಮೆರವಣಿಗೆಯಲ್ಲಿ ಪೂರ್ಣಕುಂಭದೊಂದಿಗೆ ಮಹಿಳೆಯರು, ಭಜನಾ ತಂಡಗಳು, ಕೆರಳ ಚೆಂಡೆ ಹಾಗೂ ಸ್ಥಳೀಯ ಚೆಂಡೆ ತಂಡಗಳು ಪಾಲ್ಗೊಳ್ಳಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.