



ಮಣಿಪಾಲ: ಮಣಿಪಾಲದ ಶ್ರೀ ಶಾರದಾ ಟೀಚರ್ ಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಾಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್ (D.MED)) ಶಿಕ್ಷಕಿಯರ ತರಬೇತಿ ಪಡೆದ 2023-24 ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಪ್ರಮಾಣ ಪತ್ರ ವಿತರಣೆ ಮತ್ತು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಮಣಿಪಾಲದ ಕ್ರಿಸ್ಟಲ್ ಬಿಜ್ಹ್ ಹಬ್‍ನಲ್ಲಿ ಆ.10 ರಂದು ಶ್ರೀಮತಿ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಡೂರು ಗ್ರಾವಿಟ್ ಇಂಗ್ಲೀಷ್ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿರುವ, ಹೆಸರಾಂತ ಹಾಸ್ಯಕಲಾವಿದರಾದ ಶ್ರೀ ಮನೋಹರ ಹೆಗ್ಡೆ (ಮನು ಹಂದಾಡಿ)ರವರು ಮಾತನಾಡಿ ಶಿಕ್ಷಕಿಯರಿಗೆ ತಾಳ್ಮೆಯ ಅಗತ್ಯತೆಯ ಬಗ್ಗೆ ತಿಳಿಸಿ ತಮ್ಮದೇ ಶಾಲೆಯ ಓರ್ವ ಶಿಕ್ಷಕಿಯ ಉದಾಹರಣೆಯನ್ನು ಕೊಟ್ಟರು. ಕಥೆಗಳ ಮೂಲಕ ಮಕ್ಕಳ ಮನಸ್ಸನ್ನು ಆಕರ್ಷಿಸಿ ವಿದ್ಯೆಯಲ್ಲಿ ಅವರಿಗೆ ಆಸಕ್ತಿ ಉಂಟಾಗುವಂತೆ ಮಾಡಬೇಕೆಂದು ಕರೆಯಿತ್ತರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಸಲಹಾ ಸಮಿತಿಯ ಡಾ. ಎನ್.ವಿ. ಕಾಮತ್‍ರವರು ಮುಖ್ಯ ಅತಿಥಿಯವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಮತಿ ಎಚ್.ಡಿ. ದೀಪಿಕಾರವರು ವಿವಿಧ ಹಂತಗಳನ್ನು ಪೂರೈಸಿದ 6ರಿಂದ 11 ವರ್ಷದ ಮಕ್ಕಳಿಗೆ ಅಬಾಕಸ್ ಪ್ರಮಾಣ ಪತ್ರವನ್ನು ವಿತರಿಸಿದರು.
2023-24ನೇ ಸಾಲಿನ ಡಿ.ಎಮ್.ಎಡ್ ಪರೀಕ್ಷೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಶಿಷ್ಟ ಶ್ರೇಣಿ ಪಡಕೊಂಡ ಶ್ರೀಮತಿ ರೇಷ್ಮಾ ಅನಿತಾ ಮಾಥಯಸ್ ಮತ್ತು ಶ್ರೀಮತಿ ಸುಶ್ಮಾ ಪೈರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಶ್ರೀಮತಿ ದಿವ್ಯಾ ಕೋಟ್ಯಾನ್ ಹಾಗೂ ಶ್ರೀಮತಿ ಅನುಷಾ ಆರ್ ನಾಯಕ್‍ರವರು ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವನ್ನು ಹಾಗೂ ಶ್ರೀಮತಿ ಜೋತ್ಸನಾರವರು ಸಮಾರಂಭದ ಕಾರ್ಯಕ್ರಮವನ್ನು ನಿರೂಪಿಸಿದರು ಪ್ರಾಂಶುಪಾಲೆ ಶ್ರೀಮತಿ ಸುನೀತಾರವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.