logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

AIMIT ಕೇಂದ್ರ ಮತ್ತು IBM ನಡುವಿನ ತಂತ್ರಜ್ಞಾನ ಮತ್ತು ನಿರ್ವಹಣಾ ಶಿಕ್ಷಣದ ಉನ್ನತಿಗಾಗಿ ಸಹಿ

ಟ್ರೆಂಡಿಂಗ್
share whatsappshare facebookshare telegram
7 Jun 2025
post image

ಮಂಗಳೂರು: ಸೈಂಟ್ ಅಲೋಶಿಯಸ್ (ಮಾನ್ಯ ವಿಶ್ವವಿದ್ಯಾನಿಲಯ), AIMIT ಕೇಂದ್ರ ಮತ್ತು IBM ನಡುವಿನ ಒಡಂಬಡಿಕೆಯನ್ನು 2025ರ ಜುಲೈ 03ರಂದು ಅಧಿಕೃತವಾಗಿ ಸಹಿ ಹಾಕಲಾಯಿತು. ಈ ಸಹಿ ಸಮಾರಂಭದಲ್ಲಿ AIMIT ಕೇಂದ್ರದ ನಿರ್ದೇಶಕರಾದ ಡಾ. ಫಾ. ಕಿರಣ್ ಕೋಟ, IBM ನ ಸಾಫ್ಟ್‌ವೇರ್ ಸೇವೆಗಳ ರಾಷ್ಟ್ರೀಯ ನಿರ್ವಾಹಕರು ಶ್ರೀ ಜಗದೀಶ್ ಭಟ್, IBMನ ಪ್ರಾದೇಶಿಕ ನಿರ್ವಾಹಕರು ಶ್ರೀ ಮಧುಸೂಧನ್, ಟೆಕ್‌ಪಾಥ್‌ನ ಪ್ರಾದೇಶಿಕ ನಿರ್ವಾಹಕ ಶ್ರೀ ಜಿತೇಶ್ ಹಾಗೂ AIMITನ ಡೀನ್‌ಗಳಾದ ಡಾ. ರಜನಿ ಸುರೇಶ್ ಮತ್ತು ಡಾ. ಹೆಮಲತಾ ಎನ್. ಉಪಸ್ಥಿತರಿದ್ದರು.

ಈ ಒಡಂಬಡಿಕೆಯು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಸ್ಪರ್ಧಾತ್ಮಕ ಸಂಸ್ಥೆಗಳಾಗಿ ಗುರುತಿಸಿಕೊಳ್ಳುವ ಮಹತ್ವದ ಅವಕಾಶವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ಗಳ ಶಿಕ್ಷಣ ಹಾಗೂ ತರಬೇತಿಗಾಗಿ ಉದ್ಯಮ ಮತ್ತು ಶೈಕ್ಷಣಿಕ ವಲಯಗಳಲ್ಲಿ ಆದ್ಯತೆಯ ಸಂಸ್ಥೆಯಾಗಿ ಗುರುತಿಸಿಕೊಳ್ಳುವ ಅವಕಾಶವಿದೆ. ಈ ಮೂಲಕ ವಿದ್ಯಾರ್ಥಿಗಳು ಹಾಗೂ ಬೋಧಕರು IBMನ ಶ್ರೇಷ್ಠ ಸಾಫ್ಟ್‌ವೇರ್‌ಗಳ ಬಳಕೆಯ ಮೂಲಕ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು. IBM ಸಾಫ್ಟ್‌ವೇರ್‌ಗಳನ್ನು ಆಧಾರವಾಗಿಟ್ಟುಕೊಂಡು ನವೀನ ಪಠ್ಯಕ್ರಮಗಳನ್ನೂ ಉದ್ಯಮ ಸಂಬಂಧಿತ ವಿಭಿನ್ನ ತಂತ್ರಜ್ಞಾನಗಳನ್ನೂ ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ IBM ಅಥವಾ ಅದರ ವ್ಯವಹಾರ ಪಾಲುದಾರ ಸಂಸ್ಥೆಗಳ ಉದ್ಯಮ ತಜ್ಞರಿಂದ ನೈಜ ಅನುಭವದಿಂದ ಕಲಿಯುವ ಅವಕಾಶವೂ ಲಭ್ಯವಾಗುತ್ತದೆ. ಅಂತೆಯೇ, ವಿದ್ಯಾರ್ಥಿಗಳು ಹಾಗೂ ಬೋಧಕರು IBM ಸಾಫ್ಟ್‌ವೇರ್ ಆಧಾರಿತ ವೃತ್ತಿಪರ ಮತ್ತು ಜಾಗತಿಕ ಪ್ರಮಾಣಪತ್ರಗಳನ್ನು ಪಡೆದು ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಯಲು ಈ ಒಡಂಬಡಿಕೆ ನೆರವಾಗಲಿದೆ.

IBM ಹಾಗೂ ಸೈಂಟ್ ಅಲೋಶಿಯಸ್ ನಿರ್ವಹಣಾ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (AIMIT) IT/ಎಂಬಿಎ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ IBM ಸಾಫ್ಟ್‌ವೇರ್ ಕೌಶಲ್ಯದ ಅಗತ್ಯವನ್ನು ಅರಿತಿವೆ. ಈ ಸಹಯೋಗದ ಉದ್ದೇಶ, IBM ಸಾಫ್ಟ್‌ವೇರ್‌ನಲ್ಲಿ ತಜ್ಞರಾಗಿರುವ ಪದವೀಧರರನ್ನು ಹೆಚ್ಚಿಸುವುದು. IBM ಮತ್ತು AIMIT ಎರಡು ಸಂಸ್ಥೆಗಳು ಈ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮದ ಕ್ಷೇತ್ರದಲ್ಲಿ ಯಶಸ್ವಿ ಭವಿಷ್ಯ ನಿರ್ಮಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶಿಸಲಾಗಿದೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.