



ಸೆಕ್ವಾಚಿ(ಅಮೆರಿಕ): ಗುಂಡಿನ ದಾಳಿ ಪರಿಣಾಮ ಸೆಕ್ವಾಚಿಯ ಟೆನ್ನೆಸ್ಸಿಯಲ್ಲಿನ ಒಂಟಿ ಮನೆಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮನೆಗೆ ಬೆಂಕಿ ಹಚ್ಚಲಾಗಿದ್ದು, ದಾಳಿಯಲ್ಲಿ ಗುಂಡೇಟಿಗೆ ತೀವ್ರ ಗಾಯಗೊಂಡಿದ್ದ 7ನೇ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಇದು ಕುಟುಂಬ ಕಾರಣಕ್ಕೆ ನಡೆದ ದಾಳಿಯಾಗಿದೆ ಎಂದು ಹೇಳಲಾಗಿದೆ. ಮೃತ ಗ್ಯಾರಿ ಬಾರ್ನೆಟ್ ಎಂಬಾತನನ್ನು ಶಂಕಿತ ದಾಳಿಕೋರ ಎಂದು ಹೇಳಲಾಗಿದೆ. ಅಲ್ಲದೇ ಸ್ಥಳದಲ್ಲಿ ಆತನ ಮಾಜಿ ಪತ್ನಿ ರೆಜಿನಾ ಬಾರ್ನೆಟ್ ಕೂಡ ಶವವಾಗಿದ್ದಾಳೆ ಎಂದು ಟೆನ್ನೆಸ್ಸೀ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ತಂಡ ತಿಳಿಸಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.