logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಪಾಠೇತರ ಚಟುವಟಿಕೆಗಳಿಂದ ಕೌಶಲ ವೃದ್ಧಿ : ಬಸ್ತಿ ಪುರುಷೋತ್ತಮ ಶೆಣೈ

ಟ್ರೆಂಡಿಂಗ್
share whatsappshare facebookshare telegram
6 Nov 2023
post image

ಕಾರ್ಕಳ: ಕಲಿಯುವ ಆಸಕ್ತಿ ಮತ್ತು ಸಾಧಿಸುವ ಛಲ ಇದ್ದರೆ ಸೋಲುವ ಮಾತೇ ಇಲ್ಲ .ಶಿಕ್ಷಣ ಜ್ಞಾನ ಮತ್ತು ಅನುಭವ ನೀಡಿದರೆ ಪಾಠೇತರ ಚಟುವಟಿಕೆಗಳು ಕೌಶಲ ಮತ್ತು ಸಾಮರ್ಥ್ಯವನ್ನು ಮಕ್ಕಳಲ್ಲಿ ತುಂಬುತ್ತವೆ .ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹೆತ್ತವರು ಹಾಗೂ ಸಮಾಜದ ಜವಾಬ್ದಾರಿಯುತ ಜನರು ಮಕ್ಕಳಿಗೆ ಈ ದಿಸೆಯಲ್ಲಿ ಪ್ರೇರಣೆ ನೀಡಬೇಕು.

ಎಂದು ಮಂಗಳೂರಿನ ಕೆನರಾ ವಿಕಾಸ ಕಾಲೇಜಿನ ಕೋ ಆರ್ಡಿನೇಟರ್ ಬಸ್ತಿ ಪುರುಷೋತ್ತಮ ಶೆಣೈ ಹೇಳಿದರು . ಅವರು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆ ಪೆರ್ವಾಜೆ ಸಭಾಂಗಣದಲ್ಲಿ ಹೊಸ ಸಂಜೆ ಬಳಗ ಆಯೋಜಿಸಿದ ದ್ವಿತೀಯ ವರ್ಷದ ಮೀರಾ ಕಾಮತ್ ಸ್ಮರಣಾರ್ಥ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು . ಪ್ರಾಯೋಜಕ , ಚಾರ್ಟರ್ಡ್ ಅಕೌಂಟೆಂಟ್ ಕಾರ್ಕಳ ಕಮಲಾಕ್ಷ ಕಾಮತ್ ಅಧ್ಯಕ್ಷತೆ ವಹಿಸಿದ್ದರು . ನಿವೃತ್ತ ಚಿತ್ರಕಲಾ ಶಿಕ್ಷಕ ಯಶವಂತ ಶೆಣೈ , ಬಸ್ತಿ ರಾಧಿಕಾ ಶೆಣೈ , ಹಿರಿಯ ಚಿತ್ರ ಕಲಾವಿದೆ ವಿದ್ಯಾ ಮಲ್ಯ ಬೆಂಗಳೂರು , ಲೇಖಕಿ ಪ್ರಜ್ವಲಾ ಶೆಣೈ , ಪ್ರೌಢ ಶಾಲಾ ಮುಖ್ಯಶಿಕ್ಷಕಿ ವೇದಾವತಿ ಎನ್ . , ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಆಸ್ಮಾ ಬಾನು , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವನಿತಾ ವಿ . ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು .

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗಝಲ್ ಗಾಯನದಲ್ಲಿ ಪ್ರಥಮ ಸ್ಥಾನ ಪಡೆದ ಲಹರಿ ಮತ್ತು ಮಿಮಿಕ್ರಿ ಸ್ಪರ್ಧೆಯ ಪ್ರಥಮ ಸ್ಥಾನಿ ಆದಿತ್ಯ ಅವರನ್ನು ಹೊಸಸಂಜೆ ಬಳಗದಿಂದ ಸನ್ಮಾನಿಸಲಾಯಿತು . ಮಾನಸ ಸ್ವಾಗತಿಸಿದರು . ಹೊಸಸಂಜೆ ಬಳಗದ ಅಧ್ಯಕ್ಷ ಆರ್ . ದೇವರಾಯ ಪ್ರಭು ಪ್ರಸ್ತಾವನೆಗೈದರು .ಅದಿತಿ ಕಾರ್ಯಕ್ರಮ ನಿರ್ವಹಿಸಿದರು .ಸ್ನೇಹಾ ವಂದಿಸಿದರು .

ಸ್ಪರ್ಧೆಯಲ್ಲಿ 580 ಮಕ್ಕಳು ಭಾಗವಹಿಸಿದ್ದರು .

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.