logo
WhatsApp Image 2026-04-02 at 14.46.04.jpeg
hindalco everlast.jpeg

ನಿದ್ರಾವಸ್ಥೆಗೆ ಜಾರಿದ ರೋವರ್ ಪ್ರಜ್ಞಾನ್: ಸೆ.22ಕ್ಜೆ ಎಬ್ಬಿಸುವ ಯತ್ನ- ಇಸ್ರೋ ಮಾಹಿತಿ

ಟ್ರೆಂಡಿಂಗ್
share whatsappshare facebookshare telegram
3 Sept 2023
post image

ಬೆಂಗಳೂರು: ಚಂದ್ರಯಾನ 3ರ ರೋವರ್ ತನ್ನ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ರೋವರ್‌ನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಿ ನಿದ್ರಾವಸ್ಥೆಗೆ (ಸ್ಲೀಪ್ ಮೋಡ್) ಜಾರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ಟ್ವೀಟ್ ಮೂಲಕ ಈ ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಪ್ರಜ್ಞಾನ್‌ ರೋವರ್‌ನ್ನು ಸ್ಲೀಪ್ ಮೋಡ್‌ನಲ್ಲಿ ಇಡಲಾಗಿದೆ. APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಪೇಲೋಡ್‌ಗಳಿಂದ ದತ್ತಾಂಶ ಲ್ಯಾಂಡರ್ ಮೂಲಕ ರವಾನೆ ಆಗುತ್ತದೆ. ಪ್ರಸ್ತುತ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ ಎಂದು ವಿವರಿಸಿದೆ. ಸೆ.22ರಂದು ಚಂದ್ರಲೋಕದಲ್ಲಿ‌ ಮುಂದಿನ ಸೂರ್ಯೋದಯದಲ್ಲಿ ಬೆಳಕು ನಿರೀಕ್ಷಿಸಲಾಗಿದೆ. ಬೆಳಕು ಸ್ವೀಕರಿಸಲು ಸೌರಫಲಕದ ರಿಸೀವರ್‌ನ್ನು ಆನ್‌ನಲ್ಲಿ ಇರಿಸಲಾಗಿದೆ. ಮುಂದಿನ ಸೂರ್ಯೋದಯದಂದು ಕಾರ್ಯ ಮುಂದುವರಿಸುವ ವಿಶ್ವಾಸವಿದ್ದು, ಮತ್ತೊಂದು ಸುತ್ತಿನ ಅಸೈನ್‌ಮೆಂಟ್‌ಗೆ ರೋವರ್‌ ಸಿದ್ಧವಾಗುವ ಭರವಸೆ ಇದೆ. ಇದು ಸಾಧ್ಯವಾಗದಿದ್ದರೆ ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಇಸ್ರೋ ಟ್ವೀಟ್‌ನಲ್ಲಿ ಹೇಳಿದೆ.

ಚಂದ್ರನಲ್ಲಿ ಸಲ್ಫರ್ ಅಂದರೆ ಗಂಧಕ ಇರುವಿಕೆಯನ್ನು ರೋವರ್ ದೃಢಪಡಿಸಿತ್ತು. ಈ ಬಗ್ಗೆ ಇಸ್ರೋ ಟ್ವೀಟ್ ಸಹ ಮಾಡಿತ್ತು.

ಸದ್ಯ ಪ್ರಜ್ಞಾನ್ ರೋವರ್ ಈವರೆಗೆ ಸುಮಾರು 15ಕ್ಕೂ ಹೆಚ್ಚು ಮೀಟರ್ ದೂರವನ್ನು ಕ್ರಮಿಸಿದೆ. ಸೌರಶಕ್ತಿ ಚಾಲಿತ ಪ್ರಜ್ಞಾನ್ ರೋವರ್ ವೈಜ್ಞಾನಿಕ ಪ್ರಯೋಗಗಳನ್ನು ಮುಂದುವರೆಸುತ್ತಿದೆ. ಚಂದ್ರಯಾನದ ಮಿಷನ್ ಇನ್ನೂ ಕೆಲ ದಿನಗಳಿದ್ದು, ಮತ್ಯಾವ ವಿಸ್ಮಯವನ್ನು ಪ್ರಜ್ಞಾನ್ ರೋವರ್ ಪತ್ತೆ ಮಾಡಲಿದೆ ಎನ್ನುವುದು ಸದ್ಯದ ಕುತೂಹಲ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.