logo
WhatsApp Image 2026-04-02 at 14.46.04.jpeg
hindalco everlast.jpeg

ಎಸ್ ಎಲ್ ಎಲ್ ಸಿ ಪೂರಕ ಪರೀಕ್ಷೆ ಯ ದಿನಾಂಕ ಪ್ರಕಟ

ಟ್ರೆಂಡಿಂಗ್
share whatsappshare facebookshare telegram
19 May 2022
post image

ಬೆಂಗಳೂರು; ಪರೀಕ್ಷೆ ಬರೆದು ಫೇಲ್ ಆದ ಅಭ್ಯರ್ಥಿಗಳು ಹಾಗೂ ಈ ಹಿಂದಿನ‌ ಎಲ್ಲ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಗಾಗಿ ಪೂರಕ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ.

ಜೂನ್ 27ರಿಂದ ಜುಲೈ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದ್ದು, ಆನ್​ಲೈನ್ ಮುಖಾಂತರ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಮೇ 30ರವರೆಗೆ ಅವಕಾಶ ಕಲ್ಪಿಸಲಾಗಿದೆ. 2002-03ರಿಂದ 2021- 22ರ ಮುಖ್ಯ ಪರೀಕ್ಷೆವರೆಗೆ ಮತ್ತು 2002-2003ಕ್ಕೂ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಈ ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.

ಬೆಳಗ್ಗೆ 10:30ರಿಂದ 1:45ರ ತನಕ ಪರೀಕ್ಷೆ ನಡೆಯಲಿದ್ದು, ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳನ್ನ‌ ನೀಡಲಾಗುತ್ತದೆ.

ಪರೀಕ್ಷಾ ಶುಲ್ಕದ ಮಾಹಿತಿ

ಒಂದು ವಿಷಯಕ್ಕೆ - 370 ರೂ.

ಎರಡು ವಿಷಯಕ್ಕೆ - 461 ರೂ.

ಮೂರು ಅಥವಾ ಮೂರಕ್ಕಿಂತ ಮೇಲ್ಪಟ್ಟು -620 ರೂ.

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಹಾಗೂ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಪೂರಕ ಪರೀಕ್ಷೆಯ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇದೆ.

ಸಹಾಯವಾಣಿ: ಪೂರಕ ಪರೀಕ್ಷೆಯ ನೋಂದಣಿ ಇತ್ಯಾದಿ‌ ವಿಷಯಗಳ ಕುರಿತು ಯಾವುದೇ ಮಾಹಿತಿ ಪಡೆಯಲು ಇಲಾಖೆ ಸಹಾಯವಾಣಿ ಆರಂಭಿಸಿದೆ. 080-23310075, 080-23310076, 080-23562267, 080- 23561271ಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.