



ಅಮರಾವತಿ (ಆಂಧ್ರಪ್ರದೇಶ): ಚೆನ್ನೈ–ದೆಹಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾನುವಾರ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಪ್ರಯಾಣಿಕರು ಗಾಬರಿಗೊಂಡ ಘಟನೆ ನೆಲ್ಲೂರಿನಲ್ಲಿ ನಡೆದಿದೆ.
ಸಂಚಾರ ವೇಳೆ ಚೆನ್ನೈ–ದೆಹಲಿ ಎಕ್ಸ್‌ಪ್ರೆಸ್‌ನ B-5ನೇ ಬೋಗಿಯಲ್ಲಿ ಹೊಗೆ ಎದ್ದಿರುವುದು ಕಂಡುಬಂತು. ದುರಂತ ತಪ್ಪಿಸುವ ಉದ್ದೇಶದಿಂದ ಚಾಲಕರು ರೈಲನ್ನು 20 ನಿಮಿಷ ಕಾವಾಲಿ ನಿಲ್ದಾಣದ ಸಮೀಪ ನಿಲ್ಲಿಸಿದರು.
ಈ ವೇಳೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ರೈಲು ಬೋಗಿಯ ಬ್ರೇಕ್ ಜಾಮ್‌ನಿಂದ ಹೊಗೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.