



ಮಂಗಳೂರು: ಸ್ನೇಹಾಲಯ ಮಾನಸಿಕರ ಪುನರ್ವಸತಿ ಕೇಂದ್ರದ ನಿವಾಸಿಗಳಿಗಾಗಿ "ಸ್ನೇಹಾಲಯ ಫ್ಯಾಷನ್ ಫೆಸ್ಟ್" ನ್ನು ಜು.29 ರಂದು ನಡೆಸಲಾಯಿತು.
ಮಾನಸಿಕ ಅಸ್ವಸ್ಥರಿಗೆ ನಡೆದ ಈ ಫ್ಯಾಷನ್ ಫೆಸ್ಟ್ ಭಾರತ ದೇಶದಲ್ಲಿ ನಡೆದ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆಯಿತು. ಮಾತ್ರವಲ್ಲದೆ ರಾಂಪ್ ವಾಕ್ ನಡೆಸಿದ ಸ್ನೇಹಾಲಯದ 49 ನಿವಾಸಿಗಳ ಉತ್ಸಾಹ, ಆತ್ಮವಿಶ್ವಾಸ ಹಾಗೂ ಆಶಾವಾದಿತನವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಸ್ನೇಹಾಲಯದ ಸಂಸ್ಥಾಪಕರು ಹಾಗೂ ಟ್ರಸ್ಟಿಗಳು ಆಗಮಿಸಿದ ಗಣ್ಯರನ್ನು ಪ್ರಿತಿಯಿಂದ ಸ್ವಾಗತಿಸಿದರು. ಮುಖ್ಯ ಅಥಿತಿಗಳಾಗಿ ಮಂಜೇಶ್ವರದ ಶಾಸಕರಾದ ಶ್ರೀ ಎ.ಕೆ. ಎಮ್ ಅಶ್ರಫ್ ಹಾಗೂ ಬ್ರದರ್ ಜೋಸೆಪ್ ಕ್ರಾಸ್ತಾ ರವರು ಈ ಫ್ಯಾಷನ್ ಫೆಸ್ಟ್ ನ ಧ್ಯೇಯೋದ್ದೇಶಗಳನ್ನು ತಿಳಿಸುವ ಫಲಕದ ಅನಾವರಣದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಜೇಶ್ವರದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಜೀನ್ ಲವಿನ ಮೊಂತೆರೊ, ಖ್ಯಾತ ನಿರೂಪಕರಾದ ವಿ.ಜೆ ಡಿಕ್ಸನ್, ಖ್ಯಾತ ಛಾಯಾಗ್ರಾಹಕ ಶಂಸುದಿನ್ ತಾಂಡಿಲಂ, ಡಿಜೆ ಶಾಡ್ಜ್, ಅಂತರಾಷ್ಟ್ರೀಯ ಫ್ಯಾಷನ್ ಶೋ ನಿರ್ದೇಶಕ ಶನೋಜ್ ಇರಾನಿ, ನೃತ್ಯ ಸಂಯೋಜಕಿ ಸಜ್ನಾ ಸಾಜ್, ವಸ್ತ್ರ ವಿನ್ಯಾಸಕಾರರಾದ ಯಜ್ಞೇಶ್ ಅಮೀನ್ ಉಳ್ಳಾಲ್, ಶ್ರೀ ರೋಶನ್ ಮಾರ್ಟಿಸ್ - ಮುಖ್ಯ ಸಂಪಾದಕರು, ಕರಾವಳಿ ಸುದ್ದಿ, ಶ್ರೀ ಅಲ್ವಿನ್ ಡಿಸೋಜಾ - ಅಧ್ಯಕ್ಷರು, ಕ್ಯಾಥೋಲಿಕ್ ಸಭಾ, ಮಂಗಳೂರು ಪ್ರಾಂತ್ಯ, ಶ್ರೀ ನವೀನ್ ಮೊಂತೆರೊ - ಸೌದಿ ಸ್ನೇಹಿತರ ಸಂಘ, ಶ್ರೀ ಎಂ.ಎಸ್.ಥಾಮಸ್ - ಸಂಸ್ಥಾಪಕ ಅಧ್ಯಕ್ಷರು ಸಂತೋಷ ಆಟ್ರ್ಸ್ & ಸ್ಪೋಟ್ರ್ಸ್ ಕ್ಲಬ್ ಸಿತಂಗೋಳಿ, ಶ್ರೀ ಫ್ಯಾಷನ್ ಮಾಡೆಲ್ ಹಾಗು ಶೋ ಡೈರೆಕ್ಟರ್ ಶೋಭಿತ್ ಹಾಗೂ ವಸ್ತ್ರ ವಿನ್ಯಾಸಗಾರ ರಾದ ಶ್ರೀಮತಿ ಅಕ್ಷಯ ಇವರು ಉಪಸ್ಥಿತತರಿದ್ದರು.
ಈ ಅಪರೂಪದ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಶ್ರೀ ಶೋಭಿತ್ ಹಾಗು ಶ್ರೀಮತಿ ಅಕ್ಷಯ ರವರನ್ನು ಸನ್ಮಾನಿಸಲಾಯಿತು.
ಮಂಗಳೂರಿನ ಖ್ಯಾತ ಕಾರ್ಯನಿರ್ವಾಹಕಿಯಾದ ಶ್ರೀಮತಿ ಲವಿಟ ಮಿನೇಜಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.