



ಕಾರ್ಕಳ ; ಸೋಲೇ ಗೆಲುವಿನ ಸೋಪಾನ , ಸೋಲು ಗೆಲುವಿಗೆ ಪಾಠವಿದ್ದಂತೆ , ನಮ್ಮಲ್ಲಿ ಸಾಧಿಸುವ ಛಲವಿದ್ದರೆ. ಸೋಲನ್ನು ಸವಾಲನ್ನಾಗಿಸಿ ಗೆಲ್ಲಲು ಸಾಧ್ಯ ಎಂದು .ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೆಸರ ಅಶೋಕ ನಾಯಕ್ ಹೇಳಿದರು , ಕಾರ್ಕಳ ತಾಲೂಕು ರಾಜಾಪುರ ಸಾರಸ್ವತ ಸಂಘ( ರಿ) ಲಕ್ಷ್ಮೀಪುರ,ಹಿರ್ಗಾನ ಇದರ ವತಿಯಿಂದ ನಡೆದ ಎಣ್ಣೆಹೊಳೆ ರಾಧಾನಾಯಕ್ ಪ್ರೌಢಶಾಲೆಯಲ್ಲಿ ನಡೆದ ಸಂಘದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. , ಕಾರ್ಕಳ ತಾಲೂಕು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಸದಾಶಿವ ಪ್ರಭು ಮಾತಾನಾಡಿ ಕ್ರೀಡೆಗಳು ಕೇವಲ ವ್ಯಾಯಾಮ ಮಾತ್ರವಲ್ಲ ,ಅದೊಂದು ಸ್ಪರ್ಧೆ , ಛಲ ಹುಟ್ಟುಹಾಕುವ ಆಯಾಮಗಳು , ಎಂದರು. ಕಾರ್ಯಕ್ರಮ ರಲ್ಲಿ ಕಾರ್ಕಳ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ನಾಯಕ್ , ,ಉದ್ಯಮಿ ಕೇಶವ್ ನಾಯಕ್ ಕಡ್ತಲ , , ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಜೈನ್ ಮೊದಲಾದವರು ಉಪಸ್ಥಿತರಿದ್ದರು , ನಿತ್ಯಾನಂದ ನಾಯಕ್ ಪ್ರಾರ್ಥೀಸಿದರು. ಬಾಲಕೃಷ್ಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.