



ತಿರುವನಂತಪುರ:ಮಾವ ಹೆಂಡ್ರಿ ಥಾಮಸ್ ಆಸ್ತಿಯ ಮೇಲೆ ಹಕ್ಕನ್ನು ನಿರಾಕರಿಸಿದ ಪಯ್ಯನ್ನೂರು ಉಪ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ತಲಿಪರಂಬದ ಡೇವಿಸ್ ರಾಫೆಲ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶ ಎನ್ ಅನಿಲ್ ಕುಮಾರ್ ವಜಾಗೊಳಿಸುವ ಮೂಲಕ ಉಪ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದಾರೆ.ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಮಾವ ಥಾಮಸ್ ತಮ್ಮ ಆಸ್ತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಹಾಗೂ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ಡೇವಿಸ್ ಪ್ರಯತ್ನಕ್ಕೆ ತಡೆ ನೀಡಬೇಕು ಎಂದು ಕೋರಿದ್ದರು. ಸೇಂಟ್ ಪಾಲ್ಸ್ ಚರ್ಚ್ ಪರವಾಗಿ ಫ್ರಾಸ್ ಜೇಮ್ಸ್ ನಸ್ರತ್ ಅವರು ಉಡುಗೊರೆ ಪತ್ರದ ಮೂಲಕ ಆಸ್ತಿ ನೀಡಿದ್ದಾರೆ. ಇಲ್ಲಿ ನಾನು ಸ್ವಂತ ಹಣದಿಂದ ಮನೆ ನಿರ್ಮಾಣ ಮಾಡಿದ್ದೇನೆ. ಈ ಆಸ್ತಿಯ ಮೇಲೆ ನನ್ನ ಅಳಿಯನಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂದು ವಾದಿಸಿದ್ದರು.ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್, ಅಳಿಯನನ್ನು ಮಾವನ ಮನೆಯ ಸದಸ್ಯ ಎಂದು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ.ತನ್ನನ್ನು ಕುಟುಂಬ ಸದಸ್ಯನಾಗಿ ದತ್ತು ತೆಗೆದುಕೊಳ್ಳಲಾಗಿದೆ ಎಂಬ ಅಳಿಯನ ವಾದವೇ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಛೀಮಾರಿ ಹಾಕಿದೆ. ಈ ಮೂಲಕ ಅಳಿಯನಿಗೆ ಮಾವನ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ ಎಂದಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.