logo
WhatsApp Image 2026-04-02 at 14.46.04.jpeg
hindalco everlast.jpeg

ಹಾಡುಗಳು ಮಧುರ ಲಯ ಸಾಹಿತ್ಯ ಸಂಯೋಜನೆ: ವಿದ್ವಾನ್ ಯಶವಂತ ಎಂ.ಜಿ

ಟ್ರೆಂಡಿಂಗ್
share whatsappshare facebookshare telegram
4 Sept 2023
post image

ಉಡುಪಿ:ಹಾಡುಗಳು ಮಧುರ, ಲಯ, ಸಾಹಿತ್ಯ, ಜೊತೆಗೆ ಸಂಗೀತ ವಾದ್ಯಗಳನ್ನು ಹೊಂದಿರುವ ಸಂಗೀತ ಸಂಯೋಜನೆಯಾಗಿದೆ. ಅಬಾಲವೃದ್ದರಾಗಿ ಸಂಗೀತವನ್ನು ಕೇಳುತ್ತಾರೆ ಎಂದು ಶಿಕ್ಷಕ  ವಿದ್ವಾನ್ ಯಶವಂತ ಹೇಳಿದರು ಅವರು ರವಿವಾರ  ಮಣಿಪಾಲದ ಪರ್ಣಕುಟೀರ ಸಭಾಂಗಣದಲ್ಲಿ ನಡೆದ ಸ್ವರಾಮೃತ ತಂಡದ ಲೋಗೋ ಬಿಡುಗಡೆ ಗೊಳಿಸಿ ಮಾತನಾಡಿದರು.   ಹಾಡುಗಳನ್ನು ಸಂಗೀತ ಕೃತಿಗಳೆಂದು ಪರಿಗಣಿಸಲಾಗುತ್ತದೆ . ಸ್ಫೂರ್ತಿ,ಸಂವೇದನೆ ಮೂಲಕ ಮನಸ್ಸಿಗೆ ಅಪ್ತವಾಗುತ್ತವೆ ಎಂದರು.

ಕೆ.ಎಂಸಿ ಅಸ್ಪತ್ರೆಯ  ಇಲೆಕ್ಟ್ರಿಕಲ್ ಇಂಜಿನಿಯರ್  ರವೀಂದ್ರ ಮಾತನಾಡಿ ಸಾಹಿತ್ಯಕ್ಕೆ ರಾಗವನ್ನು ಕೊಟ್ಟು ಹಾಡುಗಳನ್ನು ಹಾಡುತ್ತಾ ಮನಸ್ಸನ್ನು  ಮುದಗೊಳಿಸಲು ಸಾಧ್ಯ.  .

ಗಾಯಕಿ ರಶ್ಮಿ  ಅರ್ ಪ್ರಭು  ಮಾತನಾಡಿ ಸ್ವರಕ್ಕೆ ಅಮೃತವನ್ನು ನೀಡುವ ಸ್ವರಾಮೃತ ಪರಿಕಲ್ಪನೆ ಅದ್ಭುತವಾಗಿದೆ. ಹಾಡುಗಾರರಿಗೆ ಈ ತಂಡ ಆಶ್ರಯ ನೀಡಲಿದೆ ಎಂದರು .

ಖ್ಯಾತ ಗಾಯಕಿ  ವೈಷ್ಣವಿ ರವೀಂದ್ರ ಮಾತನಾಡಿ ಹಾಡುಗಾರಿಕೆ ಕೇವಲ ಮನರಂಜನೆ ಯಾಗಿಸದೆ ,ಸ್ಪರ್ಧಾತ್ಮಕವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಉದ್ಯಮಿ ರಾಧಾಕೃಷ್ಣ ಮಣಿಪಾಲ್ ಮಾತನಾಡಿದರು. ಶಾಶ್ವತ್ ತೆಳ್ಳಾರು, ಡಾ.ಗುರುಪ್ರಸಾದ್  ಶುಭಹಾರೈಸಿದರು.

ಸಭೆಯಲ್ಲಿ ಪತ್ರಕರ್ತ ಹರಿಪ್ರಸಾದ್ ನಂದಳಿಕೆ, ರಾಂ ಅಜೆಕಾರು , ಚಿತ್ತಾರ ಸೇವಾ ರೂವಾರಿ ಸುಜಿತ್ ನಂದಳಿಕೆ,  ಮಲಬಾರ್ ಗೋಲ್ಡ್ ಮಾರ್ಕೆಟಿಂಗ್ ವ್ಯವಸ್ಥಾಪಕ ರಾಘವೇಂದ್ರ ನಾಯಕ್, ಲೇಖಕಿ ಸುಮ ಕಿರಣ್ , ಲೆಕ್ಕ ಪರಿಶೋಧಕ ಸುರೇಶ್, ಗೀತಾಂಜಲಿ , ಖ್ಯಾತ ಛಾಯಾಗ್ರಾಹಕ ಶರತ್ ಕಾನಂಗಿ, ಡಾ. ಸ್ನೇಹ ಗುರುಪ್ರಸಾದ್, ಉದ್ಯಮಿ ಗಳಾದ ಹರೀಶ್ ಶೆಟ್ಟಿ, ಶಶಿಕಾಂತ್ ಪ್ರಭು ,ಜಯಾನಂದ ಕುಲಾಲ್ ,ಪ್ರಸಾದ್‌ಅಚಾರ್ಯ, ರೂಪೇಶ್ , ಸುಭಾಸ್ ಕಿರಣ್   ಮೊದಲಾದವರು ಉಪಸ್ಥಿತರಿದ್ದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.