



ಕಾರ್ಕಳ : `ಕಾರ್ಕಳ ಪುರಸಭಾ ವ್ಯಾಪ್ತಿಯ ಆನೆಕೆರೆ ಪಾರ್ಕ್ನಲ್ಲಿ ಧ್ವಜಕಟ್ಟೆ ಮತ್ತು ಧ್ವಜಸ್ತಂಭ ಇಲ್ಲದ ಕೊರತೆ ಬಹುಕಾಲದಿಂದ ಹಾಗೆಯೆ ಉಳಿದಿತ್ತು. ಆದರೆ ಜಿಲ್ಲಾ ಛಾಯಾಗ್ರಾಹಕರ ಸಂಘದ ಕಾರ್ಕಳ ವಲಯದ ಸದಸ್ಯರು ಈ ಕೊರತೆಯನ್ನು ತುಂಬಿಕೊಟ್ಟಿರುವುದು ಅಭಿನಂದನೀಯ. ರಾಷ್ಟçನಿರ್ಮಾಣದ ಕರ‍್ಯದಲ್ಲಿ ಕೈಗೂಡಿಸುವುದು ಪವಿತ್ರ ಕೆಲಸ' ಎಂದು ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹೇಳಿದರು. ಸೌತ್ ಕೆನರಾ ಫೋಟೋಗ್ರಾರ‍್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಕಾರ್ಕಳ ವಲಯದ ವತಿಯಿಂದ ಆನೆಕೆರೆ ಪಾರ್ಕ್ನ ಅಮರ್ ಜವಾನ್ ಸ್ಮಾರಕದ ಬಳಿ ನಿರ್ಮಿಸಲಾದ ಧ್ವಜಕಟ್ಟೆ ಮತ್ತು ಧ್ವಜಸ್ತಂಭ ಲೋಕಾರ್ಪಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಧ್ವಜಸ್ತಂಭ ಮತ್ತು ಧ್ವಜಕಟ್ಟೆಯನ್ನು ದೀಪಬೆಳಗಿಸಿ ಉದ್ಘಾಟಿಸಿದರು. ನಿವೃತ್ತ ಸೇನಾನಿ ಸಂಘದ ಅಜಿತ್‌ಕುಮಾರ್ ಜೈನ್ ಧ್ವಜಾರೋಹಣ ನೆರವೇರಿಸಿದರು. ಎಸ್.ಕೆ.ಪಿ.ಎ ಜಿಲ್ಲಾ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಪುರಸಭಾ ಸದಸ್ಯ ಶುಭದ ರಾವ್, ಧ್ವಜಸ್ತಂಭ ಮತ್ತು ಧ್ವಜಕಟ್ಟೆಯನ್ನು ನಿರ್ಮಿಸಿದ ಸಿವಿಲ್ ಕಾಂಟ್ರಾಕ್ಟರ್ ಸತೀಶ್ ದೇವಾಡಿಗ, ಉಮಾಮಹೇಶ್ವರ ದೇವಸ್ಥಾನ ಶಿವತಿಕೆರೆ ಸೇವಾ ಸಮಿತಿ ಅಧ್ಯಕ್ಷ ನಾಗೇಶ್ ಡಿ., ಕರಾಟೆ ಶಿಕ್ಷಕ ಸತೀಶ್ ಬೆಳ್ಮಣ್ ಉಪಸ್ಥಿತರಿದ್ದರು. ಎಸ್.ಕೆ.ಪಿ.ಎ ಕಾರ್ಕಳ ವಲಯದ ಅಧ್ಯಕ್ಷ ಈಶ್ವರ್ ಕುಂಟಾಡಿ ಸ್ವಾಗತಿಸಿದರು. ಕರ‍್ಯದರ್ಶಿ ಸುಶೀಲ್‌ಕುಮಾರ್ ವಂದಿಸಿದರು. ದತ್ತಾತ್ರೇಯ ಹಿರಿಯಂಗಡಿ ಕರ‍್ಯಕ್ರಮ ನಿರ್ವಹಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.