



ಕಾರ್ಕಳ ಜಾಗದ ತಕರಾರು ಹಿನ್ನಲೆಯಲ್ಲಿ ಅಣ್ಣನ ಮನೆಗೆ ಬೆಂಕಿ ಹಚ್ಚಿ ಓಮಿನಿಯಲ್ಲಿ ಕುಳಿತು ತಾನು ಬೆಂಕಿ ಹಚ್ಚಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಸಚ್ಚರಿಪೇಟೆ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.
ಸಚ್ಚೇರಿಪೇಟೆಯ ಕೃಷ್ಣ ಸಪಲಿಗ ಆತ್ಮಹತ್ಯೆ ಮಾಡಿಕೊಂಡವರು ಕೃಷ್ಣ ಸಫಲಿಗರ ಅಣ್ಣ ಶೇಖರ್ ಸಪಲಿಗ ಎಂಬವರ ಮನೆಗೆ ತಡರಾತ್ರಿ ಬೆಂಕಿ ಇಟ್ಟು ತಾನು ಓಮಿನಿಯಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡೀದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಣ್ಣ ಶೇಖರ್ ಅವರ ಮನೆಯಲ್ಲಿ ಮಗಳ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದು ಕೃಷ್ಣ ಸಫಲಿಗ ರಾತ್ರಿ 3 ಹೊತ್ತಿಗೆ ಈ ಕೃತ್ಯ ಎಸಗಿದ್ದಾರೆ. ಜಾಗದ ತಕರಾರು ಈ ಘಟನೆಗೆ ಮೂಲ ಕಾರಣ ಎನ್ನಲಾಗಿದೆ. ಕೃತ್ಯ ಎಸಗುವ ಮುನ್ನ ಕೃಷ್ಣ ಸಫಲಿಗ ಡೆತ್ ನೋಟ್ ಬರೆದು ಚೀಟಿಯನ್ನು ಕಾಂಪೌಂಡ್ ಗೋಡೆಗೆ ಅಂಟಿಸಿದ್ದಾರೆ. ಅಗ್ನಿಶಾಮಕ ದಳದವರ ಸಹಿತ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.