



ಕಾರ್ಕಳ: : ರಾಷ್ಟ್ರ ಮಟ್ಟದ ವಿಜ್ ನ್ಯಾಷನಲ್ ಸ್ಪೆಲ್ ಬೀ ಫೈನಲ್ ಸ್ಪರ್ಧೆಯು ಆಗಸ್ಟ್ ತಿಂಗಳಲ್ಲಿ ನಡೆಯಿತು. ಸ್ಪರ್ಧೆಯ ಫಲಿತಾಂಶವು ಅ.10ರಂದು ಪ್ರಕಟಗೊಂಡಿದ್ದು, ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿಗಳಾದ ಸಚಿ ಶೆಟ್ಟಿ ೨೬ನೇ ಸ್ಥಾನ, ಲಿಖಿತ್ ಡಿ ಶೆಟ್ಟಿ ೫೩ನೇ ಸ್ಥಾನ, ಭಗತ್ ಶೆಟ್ಟಿ ೫೪ನೇ ಸ್ಥಾನ ಮತ್ತು ೫ನೇ ತರಗತಿಯ ಸಾನ್ವಿ ಎಸ್ ೫೧ನೇ ಸ್ಥಾನ ಹಾಗೂ ಸಚಿ ಶೆಟ್ಟಿ ರಾಜ್ಯ ಮಟ್ಟದಲ್ಲಿ ೭ನೇ ಸ್ಥಾನ ಪಡೆದಿರುತ್ತಾರೆ. ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರು ಪದ್ಮಗೋಪಾಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿ, ಶುಭ ಹಾರೈಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.