



ನವದೆಹಲಿ: ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ ಅವರನ್ನು ಅವಹೇಳನ ಮಾಡಿದ್ದಕ್ಕೆ ಆಧ್ಯಾತ್ಮಿಕ ಭಾಷಣಕಾರ ಅಮೋಘ ಲೀಲಾ ದಾಸ್ ಅವರಿಗೆ ಇಸ್ಕಾನ್ 1 ತಿಂಗಳ ನಿಷೇಧವನ್ನು ಹೇರಿದೆ.
ಇತ್ತೀಚಿಗೆ ನೀಡಿದ ಪ್ರವಚನದಲ್ಲಿ ಸ್ವಾಮಿ ವಿವೇಕಾನಂದ ಅವರು ಮೀನು ಆಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದರು. ದೈವಿಕ ವ್ಯಕ್ತಿಯು ಪ್ರಾಣಿಯನ್ನು ಕೊಂದು ಅದನ್ನು ತಿನ್ನುತ್ತಾನೆಯೇ? ವಿವೇಕಾನಂದರು ಮೀನು ತಿಂದರೆ, ದೈವಿಕ ವ್ಯಕ್ತಿ ಮೀನು ತಿನ್ನಬಹುದೇ ಎಂದು ಪ್ರಶ್ನಿಸಿದ್ದರು.
ಒಬ್ಬ ದೈವಿಕ ಮಾನವನ ಹೃದಯದಲ್ಲಿ ದಯೆ ಇರುತ್ತದೆ. ಬದನೆಕಾಯಿ ನಮ್ಮ ಹಸಿವನ್ನು ನೀಗಿಸುತ್ತದೆ. ಹಾಗೆಂದ ಮಾತ್ರಕ್ಕೆ ತುಳಸಿಗಿಂತ ಬದನೆ ಉತ್ತಮ ಎಂದು ಹೇಳಬಹುದೇ? ಅಥವಾ ಭಗವದ್ಗೀತೆ ಅಧ್ಯಯನಕ್ಕಿಂತ ಫುಟ್ಬಾಲ್ ಆಡುವುದು ಮುಖ್ಯ ಎಂದು ಹೇಳುವುದು ಸರಿಯೇ?. ಸ್ವಾಮಿ ವಿವೇಕಾನಂದರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಅವರು ಇಲ್ಲೇ ಇದ್ದಿದ್ದರೆ ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ. ಆದರೆ ಅವರು ಹೇಳುವ ಎಲ್ಲವನ್ನೂ ನಾವು ಕುರುಡಾಗಿ ನಂಬಬಾರದು ಎಂದು ತಿಳಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.