



ಹೆಬ್ರಿ: ಭಾಷಾಭಿಮಾನದಿಂದ ದೇಶಾಭಿಮಾನ ಸೃಜಿಸುತ್ತದೆ. ಕನ್ನಡ ನಾಡು, ನುಡಿ, ಕಲೆ, ಸಂಸ್ಕೃತಿಯ ಬಗ್ಗೆ ಒಲವನ್ನು ಹೊಂದಿರಬೇಕು. ಅವಕಾಶಗಳು ದೊರಕುವುದು ವಿರಳ. ವಿದ್ಯಾರ್ಥಿಗಳು ಇಂತಹ ಸಾಹಿತ್ಯದ ವೇದಿಕೆಯನ್ನು ಬಳಸಿಕೊಂಡು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ಅವರು ಹೇಳಿದರು.
ಇವರು ಎಸ್.ಆರ್.ಪದವಿ ಪೂರ್ವ ಕಾಲೇಜಿನಲ್ಲಿ, ನಡೆದ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭ ಹಾಗು ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ.ಎನ್.ಶೆಟ್ಟಿ ಅವರು ಮಾತನಾಡಿ, ಕನ್ನಡದ ಪ್ರೀತಿಯನ್ನು ಎಳವೆಯಿಂದಲೇ ರೂಢಿಸಿಕೊಂಡು ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಬದುಕಿನಲ್ಲಿ ಇಂತಹ ಕವಿಗೋಷ್ಠಿಯ ಅವಕಾಶಗಳು ದೊರೆತರೆ ಉಪಯೋಗಿಸಿಕೊಳ್ಳಬೇಕು. ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್.ಆರ್. ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಗುರುಪ್ರಸಾದ್, ಕನ್ನಡ ಉಪನ್ಯಾಸಕರು ಹಾಗು ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕರಾದ ದೀಪಕ್.ಎನ್ ಅವರು ವಿದ್ಯಾರ್ಥಿಗಳು ವಾಚಿಸಿದ ಕವನಗಳಿಗೆ ಪ್ರತಿಕ್ರಿಯೆ ನೀಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ, ಇತ್ತೀಚೆಗೆ ಅಗಲಿದ ಸಾಹಿತ್ಯ ಸಂಘಟಕರು, ಪರಿಚಾರಕರಾದ ಡಾ. ಶೇಖರ ಅಜೆಕಾರು ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಮೌನ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆದ ಈ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ವರದಿಯನ್ನು ವಿದ್ಯಾರ್ಥಿನಿ ಪೂರ್ವಿ.ಸಿ.ಆರ್ ವಾಚಿಸಿದರು.
ವಿದ್ಯಾರ್ಥಿ ಕವಿಗೋಷ್ಠಿ:
ಎಸ್.ಆರ್.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ, ಸಂತೃಪ್ತಿ, ಕುಮಾರ್.ಎ.ಎನ್, ರಾಹುಲ್ ಎಮ್.ಎಸ್, ಅನೂಪ್.ಕೆ.ಎಸ್, ಆಕಾಂಕ್ಷ.ಕೆ.ಎಸ್, ವೈ.ಸಾಕ್ಷತ್ ಶೆಟ್ಟಿ, ಹರ್ಷಿತಾ, ಸಂಯುಕ್ತ.ಜಿ.ಗೌಡ, ಎಚ್.ಎಚ್.ವೈಷ್ಣವಿ, ಅಭಿಷೇಕ್ ಶೆಟ್ಟಿ, ರವಿತೇಜ, ದೀಕ್ಷಾ, ಚಂದನ್.ಡಿ, ಪ್ರತೀಕ ಕವನ ವಾಚಿಸಿದರು.
ವಿದ್ಯಾರ್ಥಿಗಳಾದ ಸುಷ್ಮಾ ಸ್ವಾಗತಿಸಿ, ಇಂಧುಶ್ರೀ ವಂದಿಸಿ, ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.