



ಕಾರ್ಕಳ: ಪುಣ್ಯ ಭೂಮಿ ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಜ್ಞಾನಭಾರತ್ - ಬಾಲಸಂಸ್ಕಾರ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಸಹಯೋಗದಲ್ಲಿ ವಿಜೃಂಭಣೆಯಿಂದ ಜ್ಞಾನಸುಧಾ ಆವರಣದಲ್ಲಿ ನಡೆಯಿತು.
ಅಯೋಧ್ಯೆಯ ಕರಸೇವೆಯಲ್ಲಿ ಕಾರ್ಕಳವನ್ನು ಪ್ರತಿನಿಧಿಸಿದ್ದ ಶ್ರೀ ನಾರಾಯಣ ಮಣಿಯಾಣಿಯವರನ್ನು ಟ್ರಸ್ಟಿನ ವತಿಯಿಂದ, ಸಮಸ್ತ ಕರಸೇವಕರ ಪರವಾಗಿ ಗೌರವಿಸಲಾಯಿತು. ಇತ್ತೀಚೆಗೆ ತೆಂಗಿನ ಮರದಿಂದ ಬಿದ್ದು ನಡೆದಾಡುವ ಸಾಮಥ್ರ್ಯ ಕಳೆದುಕೊಂಡ ಶ್ರೀ ಉದಯ್ ಸಾಣೂರು, ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಜೋಡುಕಟ್ಟೆಯ ಶ್ರೀ ಸುಧೀರ್ ಆಚಾರ್ಯ ಹಾಗೂ ಕಿಡ್ನಿ ವೈಫಲ್ಯಕ್ಕೊಳಗಾದ ನಿಟ್ಟೆಯ ಶ್ರೀ ಪ್ರವೀಣ್ ಕುಮಾರ್‍ರವರಿಗೆ ತಲಾ 10ಸಾವಿರದಂತೆ ಒಟ್ಟು 30ಸಾವಿರ ರೂಪಾಯಿಗಳ ಧನಸಹಾಯವನ್ನು ನೀಡಲಾಯಿತು.
ಜ್ಞಾನಭಾರತ್ ಆಯೋಜಿಸಿದ ಕಾರ್ಕಳ-ಹೆಬ್ರಿ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರ ನೀಡಲಾಯಿತು ಹಾಗೂ ಬಾಲಸಂಸ್ಕಾರದ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೂ ಬಹುಮಾನ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭ ಗಾಯಕ ಸಚಿತ್ ಪೂಜಾರಿ ನಂದಳಿಕೆ ಇವರಿಂದ ‘ಭಕ್ತಿಸುಧೆ’, “ಜ್ಞಾನಭಾರತ್ ವೃಂದ” ಬಾಲಸಂಸ್ಕಾರ ವಿದ್ಯಾರ್ಥಿಗಳಿಂದ ‘ಶ್ರವಣಕುಮಾರ’ ಕಿರು ಪ್ರಹಸನ ಹಾಗೂ ‘ಶ್ರೀರಾಮಚಂದ್ರ ಪುರಪ್ರವೇಶ’ ದೃಶ್ಯರೂಪಕವನ್ನು ಪ್ರಸ್ತುತ ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ಶ್ರೀಮತಿ ವಿದ್ಯಾವತಿ ಎಸ್ ಶೆಟ್ಟಿ, ಜ್ಞಾನಭಾರತ್ ವೃಂದದ ಅಧ್ಯಕ್ಷರಾದ ಶ್ರೀ ದಿನೇಶ್ ಎಂ ಕೊಡವೂರ್, ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿ ಶ್ರೀ ಸಾಹಿತ್ಯ, ಜ್ಞಾನಭಾರತ್‍ನ ಉಪಾಧ್ಯಕ್ಷರಾದ ಶ್ರೀ ದಯಾನಂದ ಬಾಯಾರಿ, ಸಂಚಾಲಕರಾದ ಶ್ರೀ ಸುಮಿತ್ ಉಪಸ್ಥಿತರಿದ್ದರು. ವೃಂದದ ಕಾರ್ಯದರ್ಶಿ ಶ್ರೀಮತಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.