



ಕಾರ್ಕಳ : ಭಗವಂತನ ಉಪಾಸನೆ ಯಿಂದ ಕಾರ್ಯಸಿದ್ದಿ ಯಾಗುವುದು , ದೇವರ ಭಜನೆ , ಭಕ್ತಿ, ಶ್ರದ್ದೇ ಉತ್ತಮ ಸಂಸ್ಕಾರ ಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸಮಾಜದ ಲ್ಲಿ ಉತ್ತಮ ಪ್ರಜೆಯಾಗಬಹುದು ಎಂದು ಶ್ರೀ ಶ್ರೀ ಕವಳೆ ಮಠದ ಶಿವಾನಂದ ಸರಸ್ವತಿ ಸ್ವಾಮಿಜಿ ಆಶೀರ್ವಚನ ನೀಡಿ ಮಾತನಾಡಿದರು.
ಕಾರ್ಕಳ ತಾಲೂಕು ಹಿರ್ಗಾನದ ಮಹಾಲಕ್ಷ್ಮಿ ದೇವಸ್ಥಾನ ದಲ್ಲಿ ನಡೆದ ರಾಜಪುರ ಸಾರಸ್ವತ ಸಂಘದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು ಮಹಾಲಕ್ಷ್ಮೀ ದೇವಸ್ಥಾನ ಮೊಕ್ತೇಸರ ಅಶೋಕ್ ನಾಯಕ್ ಮಾತನಾಡಿದರು. ರಾಜಪುರ ಸಾರಸ್ವತ ಸಂಘದ ಅಧ್ಯಕ್ಷ ಕಡ್ತಲ ಸದಾಶಿವ ನಾಯಕ್ ಮಾತನಾಡಿ ಶುಭಹಾರೈಸಿದರು , ಇದೇ ಸಂದರ್ಭದಲ್ಲಿ ವರ್ಷ ವ್ಯಕ್ತಿ ಯಾಗಿ ಆಯ್ಕೆ ಯಾದ ಶಂಕರ್ ನಾಯಕ್ ಎಳ್ಳಾರೆ , ಹಾಗೂ ಸಮಾಜದಲ್ಲಿ ಗುರುತಿಸಿ ದ ಸಾಧಕರಿಗೆ ಸನ್ಮಾನಿಸಲಾಯಿತು..ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಸಭೆಯಲ್ಲಿ ಅತ್ರಾಡಿ ಶಾಖಮಠದ ಅಧ್ಯಕ್ಷ ಸಂತೋಷ ವಾಗ್ಳೆ, ಎರಡನೇ ಮೊಕ್ತೇಸರ ಕಡ್ತಲ ಪಾಂಡುರಂಗ ಜೋಶಿ ದುರ್ಗಾ ಪಂ .ಅಧ್ಯಕ್ಷ ಸತೀಶ್ ನಾಯಕ್ ಯಕ್ಷಗಾನ ಪೋಷಕ ರಘುನಾಥ್ ನಾಯಕ್ , ರಾಜಪುರ ಸಾರಸ್ವತ ಸಂಘದ ಮಹಿಳಾ ಸಂಘದ ಅಧ್ಯಕ್ಷೆ ಉಷಾನಾಯಕ್ ಉಪಸ್ಥಿತರಿದ್ದರು, ರಾಜಪುರ ಸಾರಸ್ವತ ಸಂಘದ ಉಪಾಧ್ಯಕ್ಷ ಸತೀಶ್ ನಾಯಕ್ ಸ್ವಾಗತಿಸಿದರು , ನಿತ್ಯಾನಂದ ನಾಯಕ್ ಪ್ರಸ್ತಾವಿಸಿದರು .ಬಾಲಕೃಷ್ಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.