



ಹೆಬ್ರಿ : ೩೭ ವರ್ಷದ ಹಿಂದಿನ ಹೆಬ್ರಿ ಸರ್ಕಾರಿ ಪ್ರೌಢಶಾಲೆಯ ೧೯೮೫ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತಂಡದ ಸಮಾಗಮ ಸಂಭ್ರಮ ಮಾದರಿ ಕಾರ್ಯ. ಈ ಕ್ಷಣ ನನ್ನ ಪಾಲಿಗೆ ಅದ್ಭುತ. ಮರೆಯಲಾಗದ ದಿನ, ಮನಸ್ಸು ತುಂಬಿ ಬಂದಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಶಿವಪುರ ಮಾರ್ಮಾಕ್ಕಿ ರಾಮಕೃಷ್ಣ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಹೆಬ್ರಿ ಸೀತಾನದಿ ನಿಸರ್ಗಧಾಮದಲ್ಲಿ ಭಾನುವಾರ ನಡೆದ ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೧೯೮೪ - ೮೫ ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸಮ್ಮೀಲನ ಸಂಭ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಡಾ. ಸುನೀತಾ ಶೆಟ್ಟಿ, ಹೆಬ್ರಿಯ ಶೋಧನ್ ಹೆಗ್ಡೆ, ಹೆಬ್ರಿಯ ಎಚ್. ಜನಾರ್ಧನ್ ನೇತ್ರತ್ವದಲ್ಲಿ ಸಮಾಗಮ ಸಂಭ್ರಮ ನಡೆಯಿತು. ಹೆಬ್ರಿ ಸರ್ಕಾರಿ ಪ್ರೌಢಶಾಲೆಗೆ ಕೊಡುಗೆಯನ್ನು ನೀಡಲಾಯಿತು. ೩೦ ಮಂದಿ ಭಾಗವಹಿಸಿದ್ದು ಬಾಲ್ಯದ ನೆನಪು ಹಂಚಿಕೊAಡು ಸಂಭ್ರಮಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.