



ಹೆಬ್ರಿ: ಅಬಾಕಾಸ್ ಮಕ್ಕಳಿಗೆ ರಾಜ್ಯ ಮಟ್ಟದ ಅಬಾಕಾಸ್ ಸ್ಪರ್ಧೆಯು ಶ್ರೀ ರಾಮ ಟವರ್ಸ್ ನ ತ್ರಿಶಾ ಸಭಾ ಭವನದಲ್ಲಿ ಸೆ.4 ರಂದು ನಡೆಯಿತು.
ವೇದಿಕ್ ಮ್ಯಾತ್ಸ್, ಅಬಕಾಸ್ ಡ್ರಾಯಿಂಗ್ ಸ್ಪರ್ಧೆ ಏರ್ಪಡಿಸಲಾಗಿದ್ದು ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ 80 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೆಬ್ರಿ ಮೈಸ್ ಕೇಂದ್ರದ ಸಂಚಾಲಕ ಕಬ್ಬಿನಾಲೆ ರಾಮಚಂದ್ರ ಭಟ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ವಿಶ್ವಕ್ಕೆ ಭಾರತ ದೇಶ ಗಣಿತಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಈಗ ಅಬಾಕಸ್ ಕಲಿಕೆ ಮೂಲಕ ಸಣ್ಣ ಮಕ್ಕಳಿಂದ ಹಿಡಿದು ಬಾಲಕ, ಬಾಲಕಿಯರಿಗೂ ಕಷ್ಟವಾದ ಗಣಿತವು ಕಲಿಯಲು ಸುಲಭವಾಗಿದೆ. ಇಲ್ಲಿ ಕಲಿಯುವಿಕೆಯಿಂದ ಮಕ್ಕಳ ಮೆದುಳು ಚುರುಕಾಗಿ ಯಾವುದೇ ಕ್ಲಿಷ್ಟಕರವಾದ ಅಂಕ ಗಣಿತವನ್ನು ಮನಸ್ಸಿನಲ್ಲೇ ಮಾಡಿ ಮುಗಿಸುವ ಸಾಮರ್ಥ್ಯ ಅಬಾಕಾಸ್ ನ ಮಕ್ಕಳಿಗಿದೆ. ನಿಮ್ಮಲ್ಲಿ ಒಂದಲ್ಲಾ ಒಂದು ಪ್ರತಿಭೆ ಇದೆ. ಇದು ಬೆಳಕಿಗೆ ಬರಬೇಕಾದರೆ ಪೋಷಕರು ತಮ್ಮ ಮಕ್ಕಳನ್ನು ಇಂತಹ ಸಂಸ್ಥೆಗೆ ಸೇರಿಸಿದರೆ ಶಿಕ್ಷಣದ ಜೊತೆಯಲ್ಲಿ ಗ್ರಾಮೀಣ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಹಕಾರಿಯಾಗಲಿದೆ ಎಂದರು.
ಸುನೀತಾ ಹೆಬ್ಬಾರ್ ಇವರ ನೇತೃತ್ವದಲ್ಲಿ ಹೆಬ್ರಿಗೆ ಮುನಿಯಾಲು, ಕಾರ್ಕಳ, ಶಿರ್ವ, ಹಿರಿಯಡ್ಕ, ಬ್ರಹ್ಮಾವರ, ಪೇತ್ರಿ, ಮೂಡಬಿದ್ರಿ ಊರುಗಳಲ್ಲಿ ಉಪ ಶಾಖೆಗಳಿದ್ದು ಅಬಕಾಸ್ ಜೊತೆಗೆ ವೇದಿಕ್ ಮ್ಯಾತ್ಸ್, ಕಿಡ್ಸ್ ಇಂಗ್ಲೀಷ್, ಡ್ರಾಯಿಂಗ್, ಚೆಸ್, ಸುಂದರ ಬರಹ, ಟ್ಯೂಷನ್ ಕ್ಲಾಸ್ ಮುಂತಾದ ಕೋರ್ಸುಗಳನ್ನು ಗ್ರಾಮೀಣ ಭಾಗದ ಮಕ್ಕಳು ಪಡೆಯುತ್ತಿದ್ದಾರೆ. ಮಕ್ಕಳು ಪೋಷಕರೊಂದಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅಬಾಕಾಸ್ ಸಂಸ್ಥೆಯ ಮುಖ್ಯಸ್ಥೆ ಸುನೀತಾ ಹೆಬ್ಬಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಅಮೃತ, ಸವಿತಾ, ರಚನಾ, ಆಶಾ, ಸಿದ್ದಾರ್ಥ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.