



ಕಾರ್ಕಳ: ಸಂಗೀತದಲ್ಲಿ ಜೀವನದ ಸಂತೃಪ್ತಿ ಅಡಗಿದೆ ಎಂದು ಉದ್ಯಮಿ ಭಾಸ್ಕರ ಶೆಟ್ಟಿ ಎಣ್ಣೆಹೊಳೆ ಹೇಳಿದರು ಅವರು ಎಣ್ಣೆಹೊಳೆಯ ಭ್ರಾಮರಿ ಮೆಲೋಡೀಸ್ ಸಾಮರ್ಥ್ಯದಲ್ಲಿ ಕಾರ್ಕಳ ತಾಲೂಕಿನ ಮರ್ಣೆಗ್ರಾಮದ ಹಂಚಿಕಟ್ಟೆ ಮಹಮ್ಮಾಯಿ ಬಯಲು ರಂಗಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆಯ ವಾಯ್ಸ್ ಆಫ್ ಎಣ್ಣೆ ಹೊಳೆ ಕಾರ್ಯಕ್ರಮದಲ್ಲಿ ಮಾತನಾಡಿದರು . ಸಂಗೀತ ಹವ್ಯಾಸವಾಗಿ ರೂಢಿಸಿಕೊಳ್ಳಿ ಎಂದು ತಿಳಿಹೇಳಿದರು.
ಖ್ಯಾತ ಜ್ಯೋತಿಷಿ ಅರುಣ್ ಭಟ್ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.
ಪ್ರಥಮ ಬಹುಮಾನ , ಮೋಹಿತ್ ಭಟ್ ದ್ವಿತೀಯ ಬಹುಮಾನ ರಾಜೇಶ್ವರಿ ಮೈಸೂರು , ತೃತೀಯ ಬಹುಮಾನ ಶ್ರೀ ರಕ್ಷಾ ಭಟ್ ,ಪಡೆದರು
ಭಾಸ್ಕರ್ ಕಾಸರಗೋಡು ,ಸಂಚಾಲಿ,ದೀಪಕ್ ಅರ್ , ಸಮಾಧಾನಕರ ಬಹುಮಾನ ದೊರೆಯಿತು. ಉದ್ಯಮಿಗಳಾದ ವಿಜಯಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಯಮಿ ಅರುಣ್ ಶೆಟ್ಟಿಗಾರ್ ,ಎಣ್ಣೆಹೊಳೆ ಹಾಲುತ್ಪಾದಕರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಚೇಳಿಬೆಟ್ಟು ಡಾ. ಸತೀಶ್ ಶೆಟ್ಟಿ ಚೇಳಿಬೆಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಗೀತಾ ಭಟ್ , ಚೇತನ್ ವರ್ಕಾಡಿ,ಮಾಧ್ಯಮಕ್ಕಾಗಿ ಶ್ರಮಿಸಿದ ಅವಿಲ್ ಅವರ ತಂಡ , ಸಂದೀಪ್ ನಾಯ್ಕ್ , ರೇಷ್ಮಾ ಶೆಟ್ಟಿ ಗೋರೂರು ಹಾಗೂ ಕಾರ್ಯಕ್ರಮ ಕ್ಕಾಗಿ ಶ್ರಮಿಸಿದ ಸದಸ್ಯರನ್ನು ಸನ್ಮಾನಿಸಲಾಯಿತು.
ಭ್ರಾಮರಿ ಮೆಲೋಡೀಸ್ ನ ರಂಜಿತ್ ಶೆಟ್ಟಿ ಚೇಳಿಬೆಟ್ಟು ಸ್ವಾಗತಿಸಿದರು ರೇಷ್ಮಾ ಶೆಟ್ಟಿ ಗೋರೂರು ಕಾರ್ಯಕ್ರಮ ನಿರೂಪಿಸಿದರು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.