logo
WhatsApp Image 2026-04-02 at 14.46.04.jpeg
hindalco everlast.jpeg

ರಾಜ್ಯ ಅಂಡರ್-17 ಫಿಡೆ ರೇಟೆಡ್ ಚೆಸ್: ರಾಷ್ಟ್ರೀಯ ಚಾಂಪಿಯನ್ಶಿಪ್‌ಗೆ ಆರಾಧ್ಯ ಎಸ್. ಶೆಟ್ಟಿ ಆಯ್ಕೆ

ಟ್ರೆಂಡಿಂಗ್
share whatsappshare facebookshare telegram
21 Jul 2026
post image

ಶಿವಮೊಗ್ಗ: ಜುಲೈ 17ರಿಂದ 19ರವರೆಗೆ ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯ ಅಂಡರ್-17 ಬಾಲಕಿಯರ ಫಿಡೆ ರೇಟೆಡ್ ಚೆಸ್ ಚಾಂಪಿಯನ್ಶಿಪ್-2026 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರಾಧ್ಯ ಎಸ್. ಶೆಟ್ಟಿ ಅವರು ರಾಷ್ಟ್ರೀಯ ಅಂಡರ್-17 ಚೆಸ್ ಚಾಂಪಿಯನ್ಶಿಪ್‌ಗೆ ಕರ್ನಾಟಕವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಮಟ್ಟದಲ್ಲಿ ಅಂಡರ್-17 ವಿಭಾಗದ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದ ಆರಾಧ್ಯ, ಮತ್ತೊಮ್ಮೆ ರಾಷ್ಟ್ರೀಯ ಚಾಂಪಿಯನ್ಶಿಪ್‌ಗೆ ಅರ್ಹತೆ ಪಡೆಯುವ ಮೂಲಕ ತಮ್ಮ ಪ್ರತಿಭೆ, ಶಿಸ್ತು, ಪರಿಶ್ರಮ ಹಾಗೂ ಸಮರ್ಪಣೆಯನ್ನು ಸಾಬೀತುಪಡಿಸಿದ್ದಾರೆ.

ಟೂರ್ನಿಯ ಆರಂಭದಿಂದಲೇ ಉತ್ತಮ ಆಟವಾಡಿದ ಆರಾಧ್ಯ, ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದ ಬೆಂಗಳೂರು ಅರ್ಬನ್‌ನ ಎಎಫ್‌ಎಂ ದೀಪ್ತಾ ಶ್ರೀನಿವಾಸ್ ಅವರನ್ನು ಸೋಲಿಸಿ ತಮ್ಮ ಸಾಮರ್ಥ್ಯವನ್ನು ಮೆರೆದರು.

ಏಳನೇ ಸುತ್ತಿನಲ್ಲಿ ಮಂಗಳೂರಿನ 1884 ಫಿಡೆ ರೇಟಿಂಗ್ ಹೊಂದಿದ್ದ ಆರುಶ್ರಿ ಸೆವೆರಿನ್ ಹೆಲೆನ್ ಡಿ ವಿರುದ್ಧ ಮಧ್ಯದಾಟದಲ್ಲಿ ಮೇಲುಗೈ ಸಾಧಿಸಿದ್ದರೂ, ಅಂತಿಮ ಹಂತದಲ್ಲಿ ನಡೆದ ಸಣ್ಣ ತಾಂತ್ರಿಕ ತಪ್ಪಿನಿಂದ ಪಂದ್ಯವನ್ನು ಕೈಚೆಲ್ಲಬೇಕಾಯಿತು.

ಆದರೆ ಸೋಲಿನಿಂದ ವಿಚಲಿತರಾಗದ ಆರಾಧ್ಯ, ಎಂಟನೇ ಸುತ್ತಿನಲ್ಲಿ 1547 ರೇಟಿಂಗ್ ಹೊಂದಿದ್ದ ಚಿತ್ರದುರ್ಗದ ದ್ರಿಥಿ ವಿ. ಅವರನ್ನು ಮಣಿಸಿ ಭರ್ಜರಿ ಪುನರಾಗಮನ ಮಾಡಿದರು.

ಅತ್ಯಂತ ಮಹತ್ವದ ಅಂತಿಮ ಸುತ್ತಿನಲ್ಲಿ 1751 ರೇಟಿಂಗ್ ಹೊಂದಿದ್ದ ಧಾರವಾಡದ ಸಿಮ್ರಾ ನದಾಫ್ ಅವರನ್ನು ಸೋಲಿಸಿ ನಿರ್ಣಾಯಕ ಗೆಲುವು ಸಾಧಿಸಿದ ಆರಾಧ್ಯ, ಕರ್ನಾಟಕವನ್ನು ಪ್ರತಿನಿಧಿಸಿ ಅಂಡರ್-17 ರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್‌ಗೆ ಅಧಿಕೃತವಾಗಿ ಅರ್ಹತೆ ಪಡೆದಿದ್ದಾರೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.