



ಕಾರ್ಕಳ: ಕಾರ್ಕಳ ಉತ್ಸವದಿಂದ ಕಲೆ, ಸಂಸ್ಕೃತಿ, ಭಾಷೆಗೆ ಹೊಸತನದ ಮೆರುಗು ದೊರಕಲಿದೆ. ಕಾರ್ಕಳ ಉತ್ಸವದ ಪೂರ್ವಭಾವಿಯಾಗಿ ಆಯೋಜಿಸಿದ ಬೀದಿ ನಾಟಕದ ಕಂಪು ಪ್ರತಿಯೊಂದು ಗ್ರಾಮಗಳ ಮನೆಗಳಿಗೂ, ಮನಗಳಿಗೂ ಬೀರುವಂತಾಗಲಿದೆ . ಬೀದಿನಾಟಕಗಳು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಭಾವಶಾಲಿ ಕಲಾ ಮಾಧ್ಯಮವಾಗಿದೆ ಎಂದು ನಾಟಕ ಕಲಾವಿದ,ನಿರ್ದೇಶಕ ಪ್ರಸನ್ನಶೆಟ್ಟಿ ಬೈಲೂರು ಹೇಳಿದರು. ಕಾರ್ಕಳ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ಕಾರ್ಕಳ ಉತ್ಸವ ಅಂಗವಾಗಿ ಆಯೋಜಿಸಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.. ಕಾರ್ಕಳ ಉತ್ಸವವು ರಾಜ್ಯಕ್ಕೆ ಮಾದರಿ ಉತ್ಸವವಾಗಿ ಮಾರ್ಪಾಡಲಿ. ಸಚಿವ ವಿ.ಸುನೀಲ್‌ಕುಮಾರ್ ಅವರ ಹೊಸ ಚಿಂತನೆ ,ಹೊಸತನವು ಶ್ಲಾಘನೀಯ. ತನ್ಮೂಲಕ ಇತರ ಕಡೆ ಪ್ರೇರಣೆಯಾಗಲಿ ಎಂದರು.

ಕಲಾವಿದ ಯಶವಂತ ಸರದೇಶ ಪಾಂಡೆ ಮಾತನಾಡಿ ಬೀದಿ ನಾಟಕ ತಂಡದಲ್ಲಿ ಒಟ್ಟು ೬೦ ಕಲಾವಿದರು ಪಾಲ್ಗೊಂಡಿದ್ದಾರೆ. ಕೋಲಾರ ಮರಗಾಲು ತಂಡ, ದಾರವಾಡದ ಲಾವಣಿ ತಂಡ, ಚಾಮರಾಜನಗರ ರಂಗವಾಹಿನಿ ತಂಡ, ಮುದ್ರಾಡಿಯ ನಾಟ್ಕವೂರಿನ ನಮ್ಮ ತುಳುವೆರ್ ತಂಡ, ತುಮಕೂರಿನ ಸೋಮನಕುಣಿತ ತಂಡ, ಸಂಭಾಳವಾದನ ತಂಡ, ಮಂಡ್ಯದ ಗಾರುಡಿ ಗೊಂಬೆ ತಂಡಗಳು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು. ಕಾರ್ಕಳ ಕ್ಷೇತ್ರದ ವಿವಿದೆಡೆಗಳಲ್ಲಿ ಕೂಡಾ ಪ್ರದರ್ಶನ ನಡೆಸುವ ಮೂಲಕ ಕಾರ್ಕಳ ಉತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದರು. ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮ ಕೇಶವ್ , ಉಪಾಧ್ಯಕ್ಷೆ ಪಲ್ಲವಿ ರಾವ್, ಗೇರುಬೀಜ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ,ಸಮಿತಿಯ ಪ್ರಮುಖರಾದ ನವೀನ್ ನಾಯಕ್ ,ಮಹಾವೀರ ಹೆಗ್ಡೆ , ವಿಖ್ಯಾತ ಶೆಟ್ಟಿ, ಕರುಣಾಕರ ಕೋಟ್ಯಾನ್, ರವೀಂದ್ರ ಮೊಯ್ಲಿ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.