logo
WhatsApp Image 2026-04-02 at 14.46.04.jpeg
hindalco everlast.jpeg

ಮುಷ್ಕರ: 28 ಕಿ.ಮೀ. ದೂರ ನಡೆದು ಮದುವೆಯಾದ ವರ

ಟ್ರೆಂಡಿಂಗ್
share whatsappshare facebookshare telegram
18 Mar 2023
post image

ಭುವನೇಶ್ವರ: ಮದುವೆ ಮಂಟಪದಲ್ಲಿ ಹಾಯಾಗಿರಬೇಕಿದ್ದ ವರನೊಬ್ಬ, ಚಾಲಕರ ಮುಷ್ಕರದಿಂದಾಗಿ ತನ್ನ ಕುಟುಂಬದೊಂದಿಗೆ ಇಡೀ ರಾತ್ರಿ 28 ಕಿ.ಮೀ. ದೂರ ನಡೆದು, ಮರುದಿನ ವಧುವಿಗೆ ತಾಳಿಕಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ರಾಯಗಡ ಜಿಲ್ಲೆಯ ಹಳ್ಳಿಯೊಂದರಲ್ಲಿ ವಧುವಿನ ನಿವಾಸವಿದ್ದು, ಅಲ್ಲಿಯೇ ಮದುವೆಯ ಏರ್ಪಾಡು ನಡೆದಿತ್ತು. ಆದರೆ, ಮದುವೆ ಮನೆ ತಲುಪುವ ಮುನ್ನವೇ, ಚಾಲಕರ ಮುಷ್ಕರ ಆರಂಭವಾಗಿತ್ತು.

ಹೀಗಾಗಿ ವರನ ಕುಟುಂಬ ಇಕ್ಕಟ್ಟಿಗೆ ಸಿಲುಕಿದೆ. ಯಾವುದೇ ವಾಹನ ಸಿಗದ ಕಾರಣ, 28 ಕಿ.ಮೀ. ನಡಿಗೆಯಲ್ಲೇ ಮದುವೆ ಮನೆ ತಲುಪಿದ್ದು, ಈ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.