



ಅಜೆಕಾರು: ಕಾಲೇಜಿನಿಂದ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ಸಿನಿಂದ ಡಾಂಬರು ರಸ್ತೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಅಜೆಕಾರು ಕಾಡುಹೊಳೆ ಎಂಬಲ್ಲಿ ಸಂಭವಿಸಿದೆ. ಉಡುಪಿ ಖಾಸಗಿ ಕಾಲೇಜಿನ ಸಿ.ಎ ವಿದ್ಯಾರ್ಥಿನಿ 18 ವರ್ಷದ ಅಭಿಜ್ಞಾ ಗಾಯಗೊಂಡ ಯುವತಿ. ಈಕೆ, ಜನವರಿ 1ರ ಮಧ್ಯಾಹ್ನ 3.10ರ ವೇಳೆಗೆ ಅಜೆಕಾರು ಕಡೆಯಿಂದ ಲಕ್ಷ್ಮೀಶ ಬಸ್ಸಿನಲ್ಲಿ ಕಾಡುಹೊಳೆ ಜಂಕ್ಷನ್ ಕಡೆಗೆ ಬಂದಿದ್ದಳು. ನಿಂತಿದ್ದ ಬಸ್ಸಿನ ಮುಂದಿನ ಬಾಗಿಲಿನಿಂದ ಅಭಿಜ್ಞಾಳು ಇಳಿಯುತ್ತಿದ್ದಾಗ ಬಸ್ಸಿನ ಚಾಲಕನು ಏಕಾಏಕಿಯಾಗಿ ಬಸ್ಸನ್ನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ್ದು, ಇದರಿಂದ ನಿಯಂತ್ರಣ ಕಳೆದುಕೊಂಡ ಆಕೆ ರಸ್ತೆ ಬಿದ್ದಿದ್ದಾಳೆ. ಇದರ ಪರಿಣಾಮ ಅಭಿಜ್ಞಾಳಿಗೆ ತೀವ್ರತರದ ಗಾಯಗಳಾಗಿವೆ. ಬಸ್ಸಿನ ಡ್ರೈವರ್, ಕಂಡಕ್ಟರ್ ಹಾಗೂ ಸಾರ್ವಜನಿಕರ ಸಹಾಯದಿಂದ ಆಕೆಯನ್ನು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸು ಚಾಲಕ ಶ್ರೀಕಾಂತ್ ವಿರುದ್ಧ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.