



. ಕುಂದಾಪುರ : ಹೊಸ ಬಸ್ ನಿಲ್ದಾಣ ಸಮೀಪ ಮುಖ್ಯರಸ್ತೆಯಲ್ಲಿರುವ ಸೈಂಟ್ ಅಂತೋನಿ ಸ್ಟುಡಿಯೋದಲ್ಲಿ ನಿನ್ನೆ ತಡರಾತ್ರಿ ಕಳ್ಳತನ ನಡೆದಿರುವ ದೂರು ದಾಖಲಾಗಿದೆ.ರಾತ್ರಿ ಸುಮಾರು 12.30ರ ಆಸುಪಾಸು ಸ್ಟುಡಿಯೋ ದ ಹಿಂಬದಿ ಮೇಲ್ಛಾವಣಿಯ ಹಂಚುಗಳನ್ನು ಸರಿಸಿ ಒಳ ಪ್ರವೇಶಿಸಿದ ಕಳ್ಳ ಡ್ರಾವರ್ ನಲ್ಲಿದ್ದ ಸುಮಾರು 2ಸಾವಿರದಷ್ಟು ನಗದು ಹಾಗೂ ಒಂದೆರಡು ಪೆನ್ ಡ್ರೈವ್ ಗಳನ್ನು ಎಗರಿಸಿದ್ದಾನೆ. ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡೊಂದನ್ನು ಮಾಡಿನ ಮೇಲೆ ಬಿಟ್ಟು ಹೋಗಿದ್ದಾನೆ. ಸ್ಟುಡಿಯೋದಲ್ಲಿ ಆಳವಡಿಸಿರುವ ಸಿಸಿ ಫೂಟೇಜ್ ನಲ್ಲಿ ಕಳ್ಳನ ಸಂಪೂರ್ಣ ಚಲನವಲಗಳು ದಾಖಲಾಗಿದ್ದು ಮೇಲ್ನೋಟಕ್ಕೆ ಪಕ್ಕದಲ್ಲಿರುವ ವೈನ್ ಶಾಪ್ ಗೆ ಬರುವ ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೆಂದು ಸಂಶಯಿಸಲಾಗಿದೆ. ಬೆಳಿಗ್ಗೆಯೇ ನಂತರವೇ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.