



ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಪ್ರತಿಫಲವನ್ನು ಬಯಸದೆ ನಾವು ಮಾಡುವ ಪ್ರತಿಯೊಂದು ಸೇವೆಯೂ ಮುಂದೆ ನಮ್ಮ ಬದುಕಿನಲ್ಲಿ ದಾರಿದೀಪವಾಗುವುದು ಎಂದು ಶ್ರೀ ಜಯಕರ್ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು. ಅವರು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ ಅವರು ಶುಭಹಾರೈಕೆಯ ನುಡಿಗಳನ್ನಾಡಿದರು. ಖ್ಯಾತ ರಂಗಕರ್ಮಿ ರವಿರಾಜ್ ಹೆಚ್ ಪಿ, ಪತ್ರಕರ್ತ ಜನಾರ್ಧನ್ ಕೊಡವೂರು, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಶ್ರೀ ಚಿರಂಜನ್ ಕೆ. ಶೇರಿಗಾರ್, ಡಾ.ಪ್ರಜ್ಞಾ ಮಾರ್ಪಳ್ಳಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಶ್ರೀಜಾ, ಕು.ದಿಶಾ, ಚೈತನ್ಯ ಹಾಗೂ ದೀಪಕ್ ಕಾಮತ್ ಎಳ್ಳಾರೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಾಯಕಿಯಾದ ಶ್ರೀಮತಿ ಸೌಜನ್ಯಾ ಇವರು ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥೆಯಾದ ಡಾ.ಪ್ರಜ್ಞಾ ಮಾರ್ಪಳ್ಳಿ ಇವರು ವಂದಿಸಿದರು. ಕು.ಸಿಂಚನಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.