logo
WhatsApp Image 2026-04-02 at 14.46.04.jpeg
hindalco everlast.jpeg

ಸೂಡ: ಅಡುಗೆ ಕೋಣೆಯಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು

ಟ್ರೆಂಡಿಂಗ್
share whatsappshare facebookshare telegram
21 Sept 2022
post image

ಸೂಡ: ಕುಸಿದುಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸೂಡ ಗ್ರಾಮದಲ್ಲಿ ಸೆ.20ರಂದು ನಡೆದಿದೆ. ಮೃತರನ್ನು ಸೂಡ ಗ್ರಾಮದ ಪೆರ್ನಾಲ್ ನಿವಾಸಿ 59ವರ್ಷದ ಫೆಲಿಕ್ಸ್ ನಜರತ್ ಎಂದು ಗುರುತಿಸಲಾಗಿದೆ. ಇವರು ಕಾಲು ನೋವಿನಿಂದ ಬಳಲುತ್ತಿದ್ದು, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಪತ್ನಿ ಸಂಧಿವಾತದಿಂದ ಬಳಲುತ್ತಿದ್ದು, ಆಕೆಯ ತಾಯಿ ಮನೆಯಾದ ಶಿರ್ವದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸೆ.20ರಂದು ಫೆಲಿಕ್ಸ್ ನಜರತ್ ಮನೆಯ ಅಡಿಗೆ ಕೋಣೆಯ ನೆಲದಲ್ಲಿ ಕುಸಿದುಬಿದ್ದಿದ್ದು, ಉಪಚರಿಸಿದಾಗ ಮೃತಪಟ್ಟಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.