



ಉಡುಪಿ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ, ಉಡುಪಿ ಜಿಲ್ಲಾ ನಾಗರಿಕ ಸೇವಾ ಟ್ರಸ್ಟ್ ಹಾಗೂ ಹೊಸಬೆಳಕು ಸಂಸ್ಥೆ ಮಣಿಪಾಲ ಇವರು ಜಂಟಿ ಕಾರ್ಯಾಚರಣೆ ನಡೆಸಿ ಕೊಪ್ಪಳ ಮತ್ತು ದಾವಣಗೆರೆ ಮೂಲದ 11 ಬಾಲಕಿಯರು ಹಾಗೂ 5 ಬಾಲಕರು ಸೇರಿ 16 ಮೀನು ಆಯುವ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ನಿಟ್ಟೂರು ಇವರ ವಶಕ್ಕೆ ನೀಡಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೊ ಮತ್ತು ಸದಸ್ಯರು ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಿದ್ದಾರೆ . ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್ , ಕಾರ್ಮಿಕ ಅಧಿಕಾರಿ ಕುಮಾರ್, ಕಾರ್ಮಿಕ ನಿರೀಕ್ಷಕ ವಿಜೇಂದ್ರ ,ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಸಮನ್ವಯ ಅಧಿಕಾರಿ ವಿ .ಡಿ .ಮೊಗೇರ ,ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕರಾದ ರೋಷನ್ ಕುಮಾರ್, .ಎನ್ .ಆರ್ .ಎಲ್ .ಎಂ .ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರಭಾಕರ ಆಚಾರ್ , ನಗರಸಭೆ ಅಧಿಕಾರಿ ನಾಗರಾಜ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ್ ದೇವಾಡಿಗ ,ಸಮಾಜ ಕಾರ್ಯಕರ್ತರಾದ ಯೋಗೀಶ್ ಸುರಕ್ಷಾ ,ಸಮಾಲೋಚಕಿ ಅಂಬಿಕಾ, ಔಟ್ ರೀಚ್ ವರ್ಕರ್ ಸಂದೇಶ ,ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕಿ ನಮ್ರತಾ, ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿಗಳಾದ ನವ್ಯಶ್ರೀ ,ಜಯಾ ,ಮಲ್ಪೆ ಠಾಣೆ ಸಿಬ್ಬಂದಿಗಳಾದ ಶಶಿಧರ್, ಮಲ್ಲನ ಗೌಡ ,ಪ್ರವೀಣ್, ನಾಗರಿಕ ಸೇವಾ ಟ್ರಸ್ಟ್ ನ ನಿತ್ಯಾನಂದ ಒಳಕಾಡು , ಮಕ್ಕಳ ಸಹಾಯವಾಣಿ ಸಮಾಲೋಚಕಿ ಜ್ಯೋತಿ ,ಹೊಸಬೆಳಕು ಸಂಸ್ಥೆಯ ತನುಲಾ ,ವಿನಯ ಆಚಾರ್ಯ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.