logo
WhatsApp Image 2026-04-02 at 14.46.04.jpeg
hindalco everlast.jpeg

ಥಾಣೆಯಲ್ಲಿ ರೈಲಿನಿಂದ ಇಳಿಯುತ್ತಿದ್ದ ವೇಳೆ ಹೃದಯಾಘಾತ : ಬಿಲ್ಲವರ ಅಸೋಸಿಯೇಷನ್ ಸದಸ್ಯ, ಕಟಪಾಡಿ ನಿವಾಸಿ ಸುಧಾಕರ್ ಟಿ ಅಂಚನ್ ನಿಧನ

ಟ್ರೆಂಡಿಂಗ್
share whatsappshare facebookshare telegram
23 Nov 2022
post image

ಮುಂಬಯಿ: ಬಿಲ್ಲವರ ಅಸೋಸಿಯೇಷನ್ ಮುಂಬೈನ ಸದಸ್ಯ, ಭಾರತ್ ಬ್ಯಾಂಕ್ ವಿಲೇಪಾರ್ಲೆ ಪೂರ್ವ ಶಾಖೆಯ ಉಪಪ್ರಬಂಧಕ ಸುಧಾಕರ್ ಟಿ ಅಂಚನ್ ಅವರು ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು. ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿಯಾಗಿರುವ ಸುಧಾಕರ್ ಟಿ ಅಂಚನ್ ಅವರು, ಊರಿನಲ್ಲಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಎಂಬವರ ಮಗನ ಮದುವೆಯಲ್ಲಿ ಪಾಲ್ಗೊಂಡು ವಾಪಾಸ್ ಮುಂಬೈಗೆ ರೈಲಿನಲ್ಲಿ ತೆರಳುತ್ತಿದ್ದರು. ಈ ವೇಳೆ ಥಾಣೆ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಇಳಿಯುತ್ತಿದ್ದಾಗ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಮೃತ ಸುಧಾಕರ್ ಅವರು ರಾಜಶೇಖರ್ ಕೋಟ್ಯಾನ್ ಅವರ ಭಾವ ಎಂದು ತಿಳಿದುಬಂದಿದೆ. ಮೃತರ ತಂದೆ ತಾಯಿ, ಸಂಸಾರ ಹಾಗೂ ಹತ್ತಿರದ ಬಂಧುಗಳು ಊರಲ್ಲಿ ಇರವುದರಿಂದ ನಾಳೆ ಉಡುಪಿಯ ಕಟಪಾಡಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲದಿಂದ ತಿಳಿದುಬಂದಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.