



ನವದೆಹಲಿ: ಜನಪ್ರಿಯ ಲೇಖಕಿ, ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅವರ ನೂತನ ಆಂಗ್ಲ ಕಾದಂಬರಿ ‘ಕಾಮನ್ ಎಟ್ ಅನ್‌ಕಾಮನ್’ ಮುಂದಿನ ವಾರ ಬಿಡುಗಡೆ ಆಗಲಿದೆ.
ಈ ಪುಸ್ತಕ ಪ್ರಕಟಿಸಿರುವ ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಪ್ರಕಾಶನ ಸಂಸ್ಥೆ ಈ ಮಾಹಿತಿ ನೀಡಿದೆ. ಅಕ್ಟೋಬರ್‌ನಿಂದ ಕಾದಂಬರಿಯು ಲಭ್ಯವಿರಲಿದೆ. ಸದ್ಯ ಎಲ್ಲ ಪ್ರಮುಖ ಇ–ಕಾಮರ್ಸ್ ಜಾಲತಾಣಗಳ ಮೂಲಕ ಪ್ರತಿಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಹೇಳಿಕೆ ತಿಳಿಸಿದೆ.
ಇತ್ತೀಚೆಗೆ ಮಕ್ಕಳ ಸಾಹಿತ್ಯ ರಚನೆಯಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದ ಸುಧಾಮೂರ್ತಿ ಅವರು ಏಳು ವರ್ಷಗಳ ಬಳಿಕ ವಯಸ್ಕ ಓದುಗರನ್ನು ಗುರಿಯಾಗಿಸಿದ ಕಾದಂಬರಿ ರಚಿಸಿದ್ದಾರೆ. ಈ ಹಿಂದೆ 2017ರಲ್ಲಿ ಅವರ ಕಾದಂಬರಿ ‘ತ್ರಿ ಥೌಸಂಡ್ ಸ್ಟಿಚ್ಚಸ್’ ಪ್ರಕಟವಾಗಿತ್ತು.
ಶನಿವಾರ 73ನೇ ವರ್ಷದ ಜನ್ಮದಿನ ಆಚರಿಸಿಕೊಂಡಿರುವ ಸುಧಾಮೂರ್ತಿ ಈವರೆಗೆ ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ಭಾಷೆಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.