



ನವದೆಹಲಿ: ಕೇಂದ್ರ ಸರ್ಕಾರವು ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ದರದಲ್ಲಿ (FRP) 10 ರೂ. ಅನ್ನು ಹೆಚ್ಚಳ ಮಾಡಿದ್ದು, ಪ್ರತಿ ಕ್ವಿಂಟಾಲ್ ಕಬ್ಬಿನ FRP 315 ರೂ. ಆಗಿದೆ. 2023–24ನೇ ಅವಧಿಯ ಅಕ್ಟೋಬರ್ ನಿಂದ ಆರಂಭವಾಗಲಿರುವ ಋತುವಿಗೆ ಈ ಪರಿಷ್ಕೃತ ದರ ಅನ್ವಯವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
2023–24ರ ಋತುವಿಗೆ ಕಬ್ಬಿನ FRPಯನ್ನು 315 ರೂ. ನಿಗದಿ ಮಾಡಲಾಗಿದೆ.
‘ಕಳೆದ ವರ್ಷದ 305 ರೂ. ರಷ್ಟಿದ್ದ ಪ್ರತಿ ಕ್ವಿಂಟಾಲ್ ಕಬ್ಬಿನ FRPಯನ್ನು ಸಂಪುಟ ಸಮಿತಿ ಸಭೆಯು 315 ರೂ. ಗೆ ಹೆಚ್ಚಿಸಿದೆ’ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.