



ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಂಧಕ ಇರುವುದನ್ನು ಚಂದ್ರಯಾನ-3ರ ರೋವರ್ (ಪ್ರಜ್ಞಾನ್) ಪತ್ತೆ ಮಾಡಿದೆ.
ಅಲ್ಲದೇ, ನಿರೀಕ್ಷೆಯಂತೆ ಅಲ್ಯುಮಿನಿಯಂ(ಎಎಲ್), ಕ್ಯಾಲ್ಸಿಯಂ,ಕಬ್ಬಿಣ, ಕ್ರೋಮಿಯಂ, ಟೈಟೆನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕ ಧಾತುಗಳು ಪತ್ತೆಯಾಗಿವೆ. ಜಲಜನಕ ಧಾತುವಿನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಇಸ್ರೋ ತಿಳಿಸಿದೆ.
ಪ್ರಜ್ಞಾನ್ ನಲ್ಲಿರುವ ಲಿಬ್ ಉಪಕರಣವು ಈ ಧಾತುಗಳನ್ನು ಪತ್ತೆ ಮಾಡಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಇಳಿದು ಬುಧವಾರಕ್ಕೆ ಒಂದು ವಾರ ತುಂಬಲಿದೆ. ಇನ್ನು ಏಳು ದಿನಗಳ ಕಾಲ ಪ್ರಯೋಗ ಮುಂದುವರಿಸಲಿದೆ. ಅಂದರೆ ಸೆ. 5ರ ವೇಳೆಗೆ ಚಂದ್ರನಲ್ಲಿ ಕತ್ತಲು ಆವರಿಸಲಿದೆ. ಅಲ್ಲಿ ಇನ್ನು ಬೆಳಕು ಕಾಣಲು ಮುಂದಿನ 14 ದಿನಗಳು ಕಾಯಬೇಕು. ಆ ಬಳಿಕ ಮತ್ತೆ ಲ್ಯಾಂಡರ್ ಮತ್ತು ರೋವರ್ ಗಳಿಗೆ ಮರು ಜೀವ ನೀಡಲು ಸಾಧ್ಯವೇ ಎಂಬುದನ್ನು ಇಸ್ರೋ ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.