



ಸುಳ್ಯ : ಬೆಳ್ಳಾರೆ ಪೊಲೀಸ್ ಠಾಣೆಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿ ಯೋರ್ವರು ವಿವಾಹಿತ ಮಹಿಳೆಯೊಂದಿಗೆ ಲಾಡ್ಜ್ ರೂಮಿನಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದೆ.
ಬೆಳ್ಳಾರೆ ಪೇಟೆಯಲ್ಲಿರುವ ಪ್ರತಿಷ್ಠಿತ ಲಾಡ್ಜ್ ಒಂದರ ಮಾಲಕನ ಪತ್ನಿ ನಿನ್ನೆ ತಡರಾತ್ರಿ ಪೊಲೀಸ್ ಅಧಿಕಾರಿ ಯೊಂದಿಗೆ ಅವರದೇ ಲಾಡ್ಜ್ ರೂಮಿನಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಗ ಆಕೆಯ ಪತಿ ರೆಡ್ ಅಂಡ್ ಆಗಿ ಇಡಿದು ಪೊಲೀಸ್ ಅಧಿಕಾರಿಗೆ ಹಿಗ್ಗಾ ಮುಗ್ಗ ತಳಿಸಿದ್ದಾರೆ ಎಂಬ ವರದಿ ಸುಳ್ಯ ಭಾಗದಲ್ಲಿ ಹರಿದಾಡುತ್ತಿದೆ. ಆದರೆ ಕೆಲವು ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಮಹಿಳೆ ಪೊಲೀಸ್ ಅಧಿಕಾರಿಯ ಪರಿಚಯದ ಓರ್ವರಿಗೆ ರೂಮ್ ತೋರಿಸಲು ಹೋಗಿದ್ದ ಸಂದರ್ಭ ಆಕೆಯ ಪತಿ ತಪ್ಪು ಕಲ್ಪನೆ ಇಟ್ಟು ಪೊಲೀಸ್ ಅಧಿಕಾರಿಗೆ ಥಳಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.