logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಪೊರೇಟ್ ಪ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಕಾರ್ಕಳದ ಸುಮೇಧಾ ಪ್ಯಾಶನ್ ಇಸ್ಟಿಟ್ಯೂಟ್

ಟ್ರೆಂಡಿಂಗ್
share whatsappshare facebookshare telegram
4 Jul 2022
post image

ಕಾರ್ಕಳ: ಬೆಂಗಳೂರು ಕಾರ್ಪೊರೇಟ್ ವುಮೆನ್ ಆಂಡ್ ವುಮೆನ್ ಎಂಟರ್ಪ್ರಿನರ್ ಆಶ್ರಯದಲ್ಲಿ ಬೆಂಗಳೂರಿನ ಹೋಟೆಲ್ ತಿಲಕ್ ಅಶೋಕದ ಸಭಾಂಗಣದಲ್ಲಿ ನಡೆದ "ಬಿಯುವರ್ ಓನ್ ಲೇಬಲ್ ಫಾರ್ ವುಮನ್" ಕಾರ್ಪೊರೇಟ್ ಪ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾಧನ ಜಿ ಆಶ್ರಿತ್ ನೇತೃತ್ವದ ಕಾರ್ಕಳದ ಪ್ರತಿಷ್ಠಿತ ಸುಮೇಧಾ ಪ್ಯಾಶನ್ ಇನಸ್ಟಿಟ್ಯೂಟ್ ತಂಡವು ಕಾರ್ಪೊರೇಟ್ ಪ್ಯಾಶನ್ ವೀಕ್2022 ನ ಗ್ರ್ಯಾಂಡ್ ಪಿನಾಲೆಯ ಮಾಡೆಲ್ ಗಳಿಗೆ ತಯಾರಿಸಿದ ನೂತನ ಬಗೆ ಬಗೆಯ ವಸ್ತ್ರವಿನ್ಯಾಸಕ್ಕಾಗಿ ವಸ್ತ್ರ ವಿನ್ಯಾಸ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಕಿರುತೆರೆಯ ನಟಿಯರಿಗೆ ವಸ್ತ್ರವಿನ್ಯಾಸಕ್ಕಾಗಿ ಕಾರ್ಕಳದ ಸುಮೇಧಾ ಪ್ಯಾಶನ್ ಇನ್ಸ್ಟಿ ಟ್ಯೂಟ್ ಮಾಲಕಿ ಸಾಧನ ಜಿ ಆಶ್ರಿತ್ ಕಿರುತೆರೆಯ ಪ್ರತಿಷ್ಠಿತ ರಾಜ್ಯ ಮಟ್ಟದ ಗೋಲ್ಡನ್ ವುಮೆನ್ ಅವಾರ್ಡ್ ಅನ್ನು ಗೆದ್ದುಕೊಂಡಿದ್ದ ಇವರು ಈ ಬಾರಿ ತನ್ನ ನೇತ್ರತ್ವದಲ್ಲಿಸುಮೇಧಾ ಪ್ಯಾಶನ್ ಇನ್ಸ್ಟಿ ಟ್ಯೂಟ್ ಕಾರ್ಪೊರೇಟ್ ಪ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ತಂಡದಲ್ಲಿ ಸುಮೇಧಾ ಪ್ಯಾಶನ್ ಇಸ್ಟಿಟ್ಯೂಟ್ ವಿಧ್ಯಾರ್ಥಿಗಳಾದ ಚಂದನ, ಪ್ರಮೋದ, ಪಂಚಮಿ, ಜಯಂತಿ , ಸುಪ್ರಿಯಾ, ಕಾದಂಬರಿ ಶೆಟ್ಟಿ, ನವ್ಯ, ಸೌಜನ್ಯ, ಪ್ರಣಮ್ಯ, ರಶ್ಮಿ, ಶಿಲ್ಪ, ಸೌಮ್ಯ ರವರು ವಸ್ತ್ರ ವಿನ್ಯಾಸದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.