



ಕಾರ್ಕಳ: ಕೆಳಹಂತದ ಇಲಾಖೆಗಳಿಂದ ಹಿಡಿದು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಕಡತ ವಿಲೇವಾರಿ ಮಾಡುವುದೇ ಸಪ್ತಾಹದ ಉದ್ದೇಶ ವೆಂದು ಸಚಿವ ವಿ ಸುನೀಲ್ ಕುಮಾರ್ ಹೇಳಿದರು. ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ ಹೆಬ್ರಿ ತಾಲೂಕಿನ ಕಡತ ವಿಲೇವಾರಿ ಸಪ್ತಾಹಕ್ಕೆ ಹೆಬ್ರಿ ತಾಲೂಕು ಕಛೇರಿಯ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿ ಇಲಾಖೆಗಳ ಸಕಲ ಸೌಲಭ್ಯಗಳು ಎಲ್ಲಾ ವ್ಯಕ್ತಿಗು ತಲುಪಬೇಕು ಕಳೆದೆರಡು ವರ್ಷಗಳ ಹಿಂದಿನ ಕರೋನ ಸಂಕಷ್ಟದ ಪರಿಸ್ಥಿತಿಯಲ್ಲಿ£ ಬಾಕಿ ಉಳಿದ ಕಡತಗಳು ಶೀಘ್ರದಲ್ಲಿಯೇ ಇತ್ಯರ್ಥಗೊಳಿಸಬೇಕು ಅದಕ್ಕಾಗಿ ,ಯಾವುದೇ ಸರಕಾರಿ ಅಧಿಕಾರಿ ರಜೆ ಮೇಲೆ ತೆರಳಲು ಅವಕಾಶ ನೀಡಿಲ್ಲ ,ಅಧಿಕಾರಿಗಳು ದಿನನಿತ್ಯ ಹೆಚ್ಚು ಸಮಯ ಮೀಸಲಿಟ್ಟರೆ ಆಡಳಿv ಯಂತ್ರಕ್ಕೆ ವೇಗ ನೀಡಲು ಸಹಕಾರಿಯಾಗಲಿದೆ ಎಂದರು
ಮಿನಿ ವಿಧಾನ ಸೌಧ ಉಧ್ಘಾಟನೆ : ಕಾರ್ಕಳ ತಾಲೂಕಿನಿಂದ ವಿಭಜಿತ ಗೊಂಡು ರಚಿತವಾದ ಹೆಬ್ರಿ ತಾಲೂಕು ಕಛೇರಿ ಕಟ್ಟದ ಸಂಕೀರ್ಣ ಮಿನಿ ವಿಧಾನ ಸೌಧದ ಕಾಮಗಾರಿ ಈಗಾಗಲೆ ಅಂತಿಮ ಹಂತದಲ್ಲಿದ್ದು ಮಾರ್ಚ್ ಮೂರನೇ ವಾರದಲ್ಲಿ ಉಧ್ಘಾಟನೆ ಸಿಧ್ಧವಾಗಲಿದೆ .ಅದಕ್ಕಾಗಿ ಈಗಾಗಲೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ ದಿನಾಂಕ ನಿಗದಿ ಪಡಿಸಲಾಗುವುದು ಎಂದರು
ರಾಜ್ಯದಲ್ಲಿಯೆ ಮೊದಲ ಬಾರಿಗೆ ಕಂದಾಯ ಮೇಳ : ಕಾರ್ಕಳ ತಾಲೂಕಿನಲ್ಲಿ ಈಗಾಗಲೆ ಕಡತ ವಿಲೇವಾರಿ ಸಪ್ತಾಹವು ಆಯೋಜನೆಗೊಂಡಿದ್ದು ಜೊತೆಗೆ ಕಂದಾಯ ಮೇಳವು ನಡೆಯುತ್ತಿದೆ ರಾಜ್ಯದಲ್ಲಿಯೆ ಮೊದಲಬಾರಿಗೆ ಕಂದಾಯ ಮೇಳವು ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು , ನಂತರ ಉಸ್ತುವಾರಿ ವಹಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆ೧೯ ರಿಂದ ಕಡತವಿಲೇವಾರಿ ಸಪ್ತಾಹವನ್ನು ಹಾಗು ಕಂದಾಯ ಮೇಳವನ್ನು ಹಮ್ಮಿಕೊಂಡು ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು
ಕರ‍್ಯಕ್ರಮದಲ್ಲಿ ತಹಶೀಲ್ದಾರ್ ಹೆಬ್ರಿ ಪುರಂದರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಜಿಎಸ್ ಕುಂದಾಪುರ ಸಹಾಯಕ ಕಮಿಷನರ್ ರಾಜು ಹೆಬ್ರಿ ಗ್ರಾ.ಪಂ ಅಧ್ಯಕ್ಷೆ ಮಾಲತಿ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.