



ಕಾರ್ಕಳ: ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ವಿ.ಸುನೀಲ್ ಕುಮಾರ್ ಅವರು ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕಾರ್ಕಳ ಕೇಂದ್ರ ಭಾಗಕ್ಕೆ ಪಾದಸ್ವರ್ಶ ಗೈಯುತ್ತಿದ್ದಂತೆ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ಮುಂಭಾಗದಲ್ಲಿ ಕಾರ್ಕಳದ ಜನತೆ ಅವರನ್ನು ಅದ್ದೂರಿಯ ಸ್ವಾಗತ ಮಾಡಲಾಯಿತು.
ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ಸಂಸ್ಥೆಯ ಪಾಲುದಾರರಾದ ರವಿಪ್ರಕಾಶ್ ಹಾಗೂ ಕಿರಣ ರವಿಪ್ರಕಾಶ್ ಪ್ರಭು ಮತ್ತು ಪ್ರಜ್ವಲ್ ಪ್ರಭು ಇವರು ಆತ್ಮೀಯವಾಗಿ ಶಾಸಕ ಸುನೀಲ್ ಕುಮಾರ್ ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು.
ಶುದ್ಧ ರೇಷ್ಮೆ ಶಾಲು ಹೊದಿಸಿ, ಹೂಮಾಲೆಯನ್ನು ಕೊರಳಿಗೆ ಹಾಕಿ, ಸಿಹಿತಿಂಡಿಯನ್ನು ಬಾಯಿಗೆ ಹಾಕುವ ಮೂಲಕ ಸಂಭ್ರಮಿಸಲಾಯಿತು.
ಕಾರ್ಕಳದ ಸವೋತ್ತಮ ಅಭಿವೃದ್ಧಿ ಶಕ್ತಿ ಮೀರಿ ಪ್ರಯತ್ನಿಸುವಂತೆ ಶಾಸಕ ಸುನೀಲ್ ಕುಮಾರ್ ಅವರಿಗೆ ರವಿಪ್ರಕಾಶ್ ಪ್ರಭು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಜೋಡುರಸ್ತೆ ಪರಿಸರದವರು, ಅಭಿಮಾನಿಗಳು ಹಾಗೂ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ಸಿಬ್ಬಂದಿಯರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.