logo
WhatsApp Image 2026-04-02 at 14.46.04.jpeg
hindalco everlast.jpeg

“ಸು ಫ್ರಂ ಸೋ” ಬಾಕ್ಸಾಫೀಸ್‌ನಲ್ಲಿ ಸೂಪರ್‌ ಹಿಟ್‌: ಸಿನಿಮಾ ಗಳಿಸಿದ ಕಲೆಕ್ಷನ್ ಎಷ್ಟು? ಇಲ್ಲಿದೆ ಡೀಟೇಲ್ಸ್.!

ಟ್ರೆಂಡಿಂಗ್
share whatsappshare facebookshare telegram
28 Jul 2025
post image

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಎನಿಸಿಕೊಂಡಿದೆ. ಈ ಸಿನಿಮಾ ಮೂರೇ ದಿನಕ್ಕೆ ‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ದಾಖಲೆಯನ್ನು ಉಡೀಸ್ ಮಾಡಿದೆ. ಭಾನುವಾರ ಬಹುತೇಕ ಎಲ್ಲ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಂಡಿದೆ.

ಸ್ಯಾಂಡಲ್​ವುಡ್​ನಲ್ಲಿ ಬಹು ಸಮಯದ ಬಳಿಕ ಒಂದೊಳ್ಳೆಯ ಸಿನಿಮಾ ಬಂದಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳು ಕೂಡ ಫುಲ್ ಆಗಿದ್ದವು ಅನ್ನೋದು ವಿಶೇಷ. ರಾಜ್ ಬಿ. ಶೆಟ್ಟಿ ಈ ಚಿತ್ರದಿಂದ ದೊಡ್ಡ ಲಾಭ ಕಂಡಿದ್ದಾರೆ.

‘ಸು ಫ್ರಮ್ ಸೋ’ ಜುಲೈ 25ರಂದು ರಿಲೀಸ್ ಆಯಿತು. ಈ ಸಿನಿಮಾದ ಟ್ರೇಲರ್ ಮೋಡಿ ಮಾಡಿತ್ತು. ಅಲ್ಲದೆ ರಾಜ್ ಬಿ. ಶೆಟ್ಟಿ ಅವರು ಸಿನಿಮಾಗೆ ಭಿನ್ನ ಪ್ರಚಾರ ಮಾಡಿದರು. ಸಿನಿಮಾ ರಿಲೀಸ್ ಆಗುವ ಮೊದಲೇ ಪ್ರೀಮಿಯರ್ ಶೋಗಳನ್ನು ಇಟ್ಟರು. ಇದು ಸಿನಿಮಾಗೆ ಸಹಕಾರಿ ಆಗಿದೆ.

‘ಸು ಫ್ರಮ್ ಸೋ’ ಮೂರು ದಿನಕ್ಕೆ 6.81 ಕೋ. ರೂ. ಕಲೆಕ್ಷನ್:

‘ಸು ಫ್ರಮ್ ಸೋ’ ಮೊದಲ ದಿನ 78 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಆ ಬಳಿಕ ಎರಡನೇ ದಿನ ಚಿತ್ರದ ಗಳಿಕೆ 2.17 ಕೋಟಿ ರೂಪಾಯಿ ಆಯಿತು. ಮೂರನೇ ದಿನವಾದ ಭಾನುವಾರ ಚಿತ್ರಕ್ಕೆ 3.86 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಸಿನಿಮಾ ಮೂರು ದಿನಕ್ಕೆ 6.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶ್ವ ಮಟ್ಟದಲ್ಲಿ ಚಿತ್ರ 7.82 ಕೋಟಿ ರೂಪಾಯಿ ಆಗಿದೆ. ಪ್ರೀಮಿಯರ್ ಶೋಗಳ ಗಳಿಕೆಯೂ ಸೇರಿದರೆ ಸರಿ ಸುಮಾರು 8 ಕೋಟಿ ರೂಪಾಯಿ ಕಲೆಕ್ಷನ್ ಆದಂತೆ ಆಗುತ್ತದೆ.

‘ಎಕ್ಕ’ ಸಿನಿಮಾ ಹಾಗೂ ‘ಜೂನಿಯರ್ ಚಿತ್ರಗಳು ಮೂರು ದಿನಕ್ಕೆ ಸುಮಾರು ಆರು ಕೋಟಿ ರೂಪಾಯಿ ಗಳಿಕೆ ಮಾಡಿದ್ದವು. ಈ ದಾಖಲೆಗಳನ್ನು ‘ಸು ಫ್ರಮ್ ಸೋ’ ಮುರಿದು ಹಾಕಿದೆ. ನವ ನಿರ್ದೇಶಕನಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ.

ರಾಜ್ ಬಿ ಶೆಟ್ಟಿ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೆಪಿ ತುಮ್ಮಿನಾಡ ಅವರು ನಿರ್ದೇಶನ ಮಾಡಿ, ನಟಿಸಿದ್ದಾರೆ. ಶನೀಲ್ ಗೌತಮ್, ಪ್ರಕಾಶ್ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ನಟಿಸಿದ್ದಾರೆ. ಸುಮೇಧ್ ಕೇ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.